ರಾಜಕೀಯರಾಜ್ಯಸುದ್ದಿ

ವಿಜಯಪುರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ ; ಇದು ಅಕ್ರಮದ ಚುನಾವಣೆ : ಯತ್ನಾಳ್

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಮೇಯರ್​​ ಹಾಗೂ ಉಪಮೇಯರ್​ ಸ್ಥಾನಕ್ಕೆ ಚುನಾವಣೆ ನಡೆಸಿದ್ದು, ಎರಡೂ ಸ್ಥಾನದಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿದೆ. ವಿಜಯಪುರ ಪಾಲಿಕೆ ಮೇಯರ್​​ ಆಗಿ ಕಾಂಗ್ರೆಸ್​​ನ ಮೆಹಜಬೀನ್​ ಹೊರ್ತಿ ಆಯ್ಕೆಯಾಗಿದ್ದಾರೆ. ಉಪ ಮೇಯರ್​​ ಆಗಿ ಕಾಂಗ್ರೆಸ್​​ನ ದಿನೇಶ್​ ಹಳ್ಳಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್​ ವಿಜಯಪುರ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ಮುಖಭಂಗವಾಗಿದೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಿಜಯಪುರ ಪಾಲಿಕೆ ಮೇಯರ್​​ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೆಹಜಬೀನ್​ ಹೊರ್ತಿ ಒಟ್ಟು 22 ಮತ ಪಡೆದು ಮೇಯರ್​ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಎಸ್​​ಟಿಗೆ ಮೀಸಲಾಗಿದ್ದ ಉಪಮೇಯರ್​ ಸ್ಥಾನಕ್ಕೆ ಕಾಂಗ್ರೆಸ್​ನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಪ್ರತಿಕ್ರಿಯೆ ನೀಡಿದ್ದು, ಇದು ಅಕ್ರಮದ ಚುನಾವಣೆ.. ಇದನ್ನ ನಾವು ಒಪ್ಪಲ್ಲ. ರಾಜ್ಯ ಸರ್ಕಾರದ ಅಣತಿಯಂತೆ ಚುನಾವಣಾಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಹೇಳಿದರು.

ಈ ಚುನಾವಣೆ ಸಂಪೂರ್ಣ ಅಕ್ರಮವಾಗಿ ನಡೆದಿದೆ. ಇದರ ಬಗ್ಗೆ ನಾವು ಕೋರ್ಟ್​ ಮೆಟ್ಟಿಲು ಏರುತ್ತೇವೆ. ಬಿಜೆಪಿ ಶಾಸಕರು, ಸಂಸದರು ಪಾಲಿಕೆ ಸದಸ್ಯರು ಎಲ್ಲರೂ ಒಗ್ಗಟ್ಟಾಗಿ ಈ ಬಾರಿ ಚುನಾವಣೆ ಎದುರಿಸಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಸ್ಪಷ್ಟಪಡಿಸಿದರು.

Comments (0)

Your email address will not be published. Required fields are marked *

Back to top button