ವಿಜಯಪುರ : ಮೂರು ಬಾರಿ ವಿಜಯಪುರ ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಪ್ರಧಾನಿ ಮೋದಿ ಅವರಿಗೆ ದೇಶದ ಚಿಂತನೆ ಅಭಿವೃದ್ದಿ ಬಿಟ್ಟು ಬೇರೆ ಕೆಲಸವಿಲ್ಲ. ರಾಮಮಂದಿರ ನಿರ್ಮಾಣ ಮಾಡಿದರು. ವಿಜಯಪುರ ಜಿಲ್ಲೆಗೆ 7 ರಾಷ್ಟ್ರೀಯ ಹೆದ್ದಾರಿಗಳನ್ನು ಮಾಡಿಕೊಟ್ಟಿದ್ದಾರೆ. ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗೋದನ್ನ ಜಗತ್ತಿನ ಯಾವುದೇ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದು ನಿಲ್ದಾಣ, ಒಂದು ಮಳಿಗೆ ಸಮರ್ಪಣೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನನ್ನ ಆರೋಗ್ಯದ ಕುರಿತು ಜನರ ಮನಸ್ಸಿನಲ್ಲಿ ಸಂಶಯಗಳಿವೆ. ನನ್ನ ಆರೋಗ್ಯದ ಕುರಿತು ಯಾರು ಏನೂ ಬೇಕಾದರೂ ಅಂದುಕೊಳ್ಳಲಿ.
ನಾನು ಮಾತ್ರ ಪಕ್ಷದ ನಿರ್ಧಾರಕ್ಕೆ ಭದ್ದನಾಗಿದ್ದೇನೆ.ಕೆಲ ಮಾಧ್ಯಮಗಳಲ್ಲಿ ನನ್ನ ಬಗ್ಗೆ ತಪ್ಪು ಸುದ್ದಿ ಮಾಡಿದ್ದಾರೆ. ರಮೇಶ ಜಿಗಜಿಣಗಿ ಲಿಂಗಾಯತ ವಿರೋಧಿಯೆಂದು ತೋರಿಸಿದ್ದಾರೆ.ಅವರ ನಾಲಿಗೆಯನ್ನು ದೇವರು ಕತ್ತರಿಸಲಿ ಎಂದು ರಮೇಶ ಜಿಗಜಿಣಗಿ ಆಕ್ರೋಶ ಹೊರ ಹಾಕಿದರು.

ನನ್ನ ಆರೋಗ್ಯದ ಕುರಿತು ಬಹಳ ಜನರ ಅಪಪ್ರಚಾರ ಮಾಡಿದರು. ನಾನು ಬದುಕುವುದಿಲ್ಲಾ, ಆಸ್ಪತ್ರೆಯಲ್ಲಿದ್ದೇನೆ ಎಂದರು. ಎಲ್ಲರಿಗೂ ಅನಾರೋಗ್ಯವಾದಂತೆ ಜ್ವರ ಬಂದಂತೆ ನನಗೂ ಜ್ವರ ಬಂದಿತ್ತು. ನಾನು ಅನಾರೋಗ್ಯದಿಂದ ಮೃತಪಡುತ್ತೇನೆಂದು ಬಿಜೆಪಿ ರಾಷ್ಟ್ರಾಧ್ಯಕ್ಷರ ಮುಂದೆ ಹೇಳಿದ್ದಾರೆ. ನನ್ನ ಸಾವು ಇವರ ಕೈಯ್ಯಲ್ಲಿ ಇಲ್ಲಾ ಎಂದು ವಿರೋಧಿಗಳಿಗೆ ರಮೇಶ ಜಿಗಜಿಣಗಿ ತಿರುಗೇಟು ನೀಡಿದರು.

ಕರ್ನಾಟಕದಲ್ಲಿ ದಲಿತ ವ್ಯಕ್ತಿಯಾಗಿ ಇತಿಹಾಸ ನಿರ್ಮಾಣ ಮಾಡಿದ್ದೇನೆಂದು ಖಡಕ್ ಆಗಿ ಮಾತನಾಡಿದ ಸಂಸದ ಜಿಗಜಿಣಗಿ,ನನಗೆ 83 ಆಗಲಿ 93 ಆಗಲಿ ಇತಿಹಾಸ ನಿರ್ಮಾಣ ಮಾಡಿಯೇ ಸಾವನ್ನಪ್ಪುತ್ತೇನೆ, ನಾನೂ ಬದುಕುವವನೇ ಎಂದು ಹೇಳಿ, ನಾನು ಇತಿಹಾಸ ನಿರ್ಮಾಣ ಮಾಡಲಿ ಎಂದು ದೇವರು ನನ್ನ ಹಣೆ ಬರಹದಲ್ಲಿ ಬರೆದಿದ್ದಾನೆ. ರೆಲ್ವೆ ಸ್ಟೇಷನ್ ಮೇಲೆ ಚಹಾ ಮಾರುವವ ಪ್ರಧಾನಿ ಆಗಲು ದೇವರು ಬರೆದಿದ್ದಾನೆ.
ರಾಜ್ಯದಲ್ಲಿ ಕಂದಾಯ ಸಚಿವನಾಗಿದ್ದಾಗ ಸಚಿವ ಸ್ಥಾನ ತ್ಯಾಗ ಮಾಡಿದ್ದೇ ಯಾರಾದರೂ ತ್ಯಾಗ ಮಾಡುತ್ತಾರಾ? ಚಿಕ್ಕೋಡಿಯಲ್ಲಿ ಮೂರು ಭಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ವಿಜಯಪುರದಲ್ಲಿ ಮೂರು ಬಾರಿ ಗೆದಿದ್ದೇನೆ, ದೇವರು ಬರೆದ ಹಣೆ ಬರಹ ಯಾರೂ ಅಳಿಸಲು ಆಗಲ್ಲ ಎಂದರು.

ನಾನು ಬೇಗ ಸಾಯಲಿ, ನಾವೇನಾದರೂ ಆಗಬೇಕೆಂದು ಕೆಲವರು ಹೇಳುತ್ತಿದ್ದಾರೆ.ಅವರು ಜಿಗಜಿಣಗಿ ಲಿಂಗಾಯತ ವಿರೋಧಿ ಎಂದು ಹೇಳುತ್ತಿದ್ಧಾರೆ. ನಾನು ಲಿಂಗಾಯತ ವಿರೋಧಿಯಲ್ಲ, ನನಗೆ ಎಲ್ಲಾ ಸಮಾಜದವರು ಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ಮಾಡಿದ್ದರಿಂದಲೇ ಇಷ್ಟು ದಿನ ಇದ್ದೇನೆ. ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡೋವರೆಗೂ ನಾನು ಸಾಯಲ್ಲಾ ಎಂದು ಆಕ್ರೋಶ ಭರಿತವಾಗಿ ಹೇಳಿ,ನಾನು ದ್ವೇಷ ರಾಜಕಾರಣ ಮಾಡಿಲ್ಲಾ,. ನನಗೆ ಕೆಟ್ಟದ್ದನ್ನು ಮಾಡಿದವರಿಗೂ ಒಳ್ಳೇಯದನ್ನೇ ಮಾಡಿದ್ದೇನೆ. ರಾಜ್ಯದ ಮೂಲೆ ಮೂಲೆಗಳಿಂದಲೂ ನನ್ನ ಆರೋಗ್ಯ ಕುರಿತು ಕರೆ ಮಾಡಿ ಆರೋಗ್ಯದ ವಿಚಾರಣೆ ಮಾಡಿದ್ದಾರೆ ಎಂದರು.

ನನಗೆ ವಿರೋಧಿಸಿದವರು ರಾಜಕಾರಣದಲ್ಲಿ ಯಾರೂ ಉಳಿದಿಲ್ಲ

ಸಂಸದ ರಮೇಶ ಜಿಗಜಿಣಗಿ ಆರೋಗ್ಯದ ಕುರಿತು ಊಹಾಪೂಹ ವಿಚಾರವಾಗಿ ರಮೇಶ ಜಿಗಜಿಣಗಿ ಆರೋಗ್ಯ ಸರಿಯಿಲ್ಲಾ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಮಾಹಿತಿ ನೀಡಿರುವ ವಿಚಾರ ಕುರಿತ ಪ್ರಶ್ನೆಗೆ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿ, ನಮ್ಮ ಪಕ್ಷದವರೇ ನನ್ನ ಆರೋಗ್ಯದ ಕುರಿತು ಮಾತನಾಡಿದ್ದಾರೆಂದು ಆಕ್ರೋಶ ಜೊರಹಾಕಿದರು. ನನ್ನ ರಾಜಕಾರಣದಲ್ಲಿ ನನಗೆ 70 ವರ್ಷ ಜೀವನದಲ್ಲಿ ನನಗೆ ಯಾರು ಅಡ್ಡ ಬಂದಿದ್ದಾರೆ ಅವರು ಯಾರೂ ಬದುಕಿಲ್ಲ. ನನ್ನ ವಿರೋಧ ಮಾಡಿದವರು ರಾಜಕೀಯದಲ್ಲಿ ಯಾರೂ ಉಳಿದಿಲ್ಲ. ಅವರು ಉಳಿಯಂಗಿಲ್ಲಾ ದೇವರೇ ಅವರನ್ನು ಖಲಾಸ್ ಮಾಡುತ್ತಾನೆಂದು ಸಂಸದ ಜಿಗಜಿಣಗಿ ಆಕ್ರೋಶಭರಿತ ಹೇಳಿಕೆ ನೀಡಿದರು.

By admin

Leave a Reply

Your email address will not be published. Required fields are marked *

Verified by MonsterInsights