ವಿಜಯನಗರ: ದಾಯಾದಿಗಳ ಕಲಹಕ್ಕೆ ಫಲವತ್ತಾಗಿ ಬೆಳೆದ ಶ್ರೀಗಂಧ ಹಾಗೂ ದಾಳಿಂಬೆ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ವಿಜಯನಗರ ಜಿಲ್ಲೆ ಸಣಕಾಸಪುರ ಗ್ರಾಮದಲ್ಲಿ ನಡೆದಿದೆ… ಕಾರಣ ಏನು ಅಂದ್ರೆ ಅಣ್ಣನ ಮೇಲಿರುವ ಕೋಪಕ್ಕೆ ಸ್ವಂತ ತಮ್ಮನೇ ಈ ಕೃತ್ಯ ಎಸೆಗಿದ್ದ. ಮಕ್ಕಳ ರೀತಿ ಬೆಳೆಸಿದ್ದ ಮರಗಳನ್ನ ಕಣ್ಣ ಮುಂದೆಯೇ ಸುಟ್ಟಿದ್ದನ್ನ ಕಂಡು ಅಣ್ಣನ ಆಕ್ರಂದನ ಮುಗಿಲು ಮುಟ್ಟಿತ್ತು.
ವಿಶ್ವನಾಥ, ರಾಮಾಂಜಿನಿ, ವೆಂಕಟಪ್ಪ, ಯುವರಾಜ, ಹನುಮಕ್ಕ, ಸುಮಿತ್ರಮ್ಮ, ಲಕ್ಷ್ಮೀದೇವಿ, ಅಭಿಷೇಕ, ಸಿಂಧು, ಮೈಲಪ್ಪ, ಎಂಬುವವರಿಂದ ಈ ಕೃತ್ಯ ನಡೆದಿದೆ. ರಾಮಚಂದ್ರಪ್ಪ ಎಂಬುವರ ಸರ್ವೆ ನಂ: 376ರಲ್ಲಿ 11.70 ಸೆಂಟ್ಸ್ ಎಕರೆ ಜಮೀನಿನಲ್ಲಿ ದಾಳಿಂಬೆ, ಶ್ರೀಗಂಧ ಮರವನ್ನ ರಾಮಚಂದ್ರಪ್ಪ ಬೆಳೆದಿದ್ದ.
ಇನ್ನು ಕೆಲವೇ ತಿಂಗಳಲ್ಲಿ ಫಸಲು ಬರುತ್ತಿತ್ತು ,ರಾತ್ರಿ ವೇಳೆ ಬೆಂಕಿ ಇಟ್ಟಿದ್ರಿಂದ ನಂದಿಸಲು ಆಗದೇ ಸಾವಿರಕ್ಕೂ ಹೆಚ್ಚು ದಾಳಿಂಬೆ, ಶ್ರೀಗಂಧ ಮರ ಸುಟ್ಟು ಭಸ್ಮವಾಗಿದೆ. ಬರಗಾಲದಲ್ಲೂ ಸಾಲಸೋಲ ಮಾಡಿ ಉತ್ತಮ ದಾಳಿಂಬೆ, ಶ್ರೀಗಂಧ ಬೆಳೆ ಬೆಳೆದಿದ್ದ ರೈತ ರಾಮಚಂದ್ರಪ್ಪ, ಅದ್ರೆ ಇದನ್ನ ಸಹಿಸದ ಸಹೋದರ ಅಣ್ಣನ ತೋಟಕ್ಕೆ ಬೆಂಕಿ ಹಚ್ಚಿದ್ದಾರೆ..ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ದಾಳಿಂಬೆ, ಶ್ರೀಗಂಧ ಫಸಲು ಸುಟ್ಟು ಹೋಗಿತ್ತು.ಕಾನೂನು ಪ್ರಕಾರ ತೋಟಕ್ಕೆ ಬೆಂಕಿ ಹಚ್ಚಿದವರಿಗೆ ಶಿಕ್ಷೆ ಆಗಬೇಕು, ರಾಮಚಂದ್ರಪ್ಪ ಕುಂಟಬಸ್ಥರ ಅಳಲು.ಗುಡೆಕೋಟೆ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ FIR ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ..