ತುಮಕೂರು: ಬಿಗ್ ಬಾಸ್ ಖ್ಯಾತಿಯ ಗಿಚ್ಚಿ ಗಿಲಿ ಗಿಲಿ ನಟ ತುಕಾಲಿ ಸಂತು ಕಾರ್ ಅಪಘಾತಕ್ಕೀಡಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಹೈವೆಯಲ್ಲಿ ತುಕಾಲಿ ಸಂತುರ ಹೊಸ ಕಾರು ಈ ಅಪಘಾತಕ್ಕೆ ಈಡಾಗಿದೆ. ತುಮಕೂರಿನಲ್ಲಿ ಶೂಟಿಂಗ್ ಮುಗಿಸಿ ಮಂಡ್ಯಕ್ಕೆ ತೆರಳುವ ವೇಳೆ ಈ ಅಪಘಾತ ಜರುಗಿದೆ. ಬುಧವಾರ ರಾತ್ರಿ ಈ ಅವಗಡ ಜರುಗಿದೆ. ಈ ಅಪಘಾತದಲ್ಲಿ ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ ಎಂದು ಸಂತು ಮಡದಿ ಮಾನಸ ತಿಳಿಸಿದ್ದಾರೆ.
ತಮ್ಮಚಾಲಕ ಕಾರು ಚಾಲನೆ ಮಾಡುತ್ತಿದ್ದರು ಹಾಗೂ ಮಧ್ಯಪಾನ ಮಾಡಿದ್ದ ಆಟೋಚಾಲಕ ನಮ್ಮ ಕಾರಿಗೆ ಗುದ್ದಿದ್ದರಿಂದ ಈ ಅವಗಡ ಜರುಗಿದೆ ಎನ್ನಲಾಗಿದೆ. ತಕ್ಷಣ ತಮ್ಮ ಚಾಲಕನ ಮೂಲಕ ಗಾಯಗಳಾಗಿದ್ದ ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಸದ್ಯ ಆಟೋ ಚಾಲಕ ಸಹ ಆರಾಮ್ ಆಗಿದ್ದಾನೆ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ನಂತರ ಬೇರೆ ಕಾರಿನ ಮೂಲಕ ಮಂಡ್ಯಕ್ಕೆ ಹೋಗ್ತಿದ್ದೇವೆ ಎಂದ ಮಾನಸ ತಿಳಿಸಿದ್ದಾರೆ.