ತುಮಕೂರು; ಆಕೆ ತಾಯಿ ಇಲ್ಲದ ತಬ್ಬಲಿ ಮಗು.. ಈ ಬಾಲಕಿಯ ಸ್ಥಿತಿ ನೋಡಿದ್ರೆ ಎಂತವರ ಕಣ್ಣಲ್ಲೂ ನೀರು ತರಿಸುತ್ತೆ . ದೊಡ್ಡಮ್ಮ ಮಾಡಿರೋ ರಾಕ್ಷಸಿ ಕೃತ್ಯಕ್ಕೆ ನೀವೂ ಕೂಡ ಹಿಡಿ ಶಾಪ ಹಾಕದೆ ಇರೋದಿಲ್ಲ. ಅಮ್ಮನಿಲ್ಲದ ಮಗಳಿಗೆ ಕೊಟ್ಟ ಶಿಕ್ಷೆ ಅದೆಂಥ ಘನಘೋರ ಗೊತ್ತ .. ದನದಾಹಿ ದೊಡ್ಡಮ್ಮಳ ಹೀನಾಯ ಕೃತ್ಯದ ಹೃದಯ ಮಿಡಿಯುವ ಸ್ಟೋರಿ ಇದು.
ಮಾನವೀಯತೆಯನ್ನೇ ಮರೆತು ಅವಮಾನವೀಯ ಕೃತ್ಯ ಎಸಗಿರೋ ಪರಿ ಇದು.. ಆಸ್ಪತ್ರೆಯ ಹಾಸಿಗೆ ಮೇಲೆ ನರಳುತ್ತಾ.. ಆತಂಕದಲ್ಲೇ ಮಲಗಿರೋ ಪುಟ್ಟ ಬಾಲಕಿ.. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಾಲಕಿಯ ತಂದೆ ರಂಗನಾಥ್ ಜೊತೆ ವಾಸವಾಗಿದ್ದರು. ತಾಯಿ ತೀರಿಕೊಂಡ ಬಳಿಕ ಅಜ್ಜಿ ಊರಾದ ಪೂಜಾರಹಳ್ಳಿಯಲ್ಲಿ ವಾಸವಾಗಿದ್ದಳು. ಐದನೇ ತರಗತಿ ಓದುತ್ತಿರುವ ಬಾಲಕಿ. ಶಿವರಾತ್ರಿ ಹಬ್ಬಕ್ಕೆಂದು ಊರಿಗೆ ಬರಲ್ಲಾ ಅಂದರು ಕೇಳದೆ ಬಲವಂತವಾಗಿ ದೊಡ್ಡಮ್ಮ ನಂಜಮ್ಮ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮಡಕಾಶಿರಾ ತಾಲೂಕಿನ ನಿದ್ರಘಟ್ಟೆ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಬಾಲಕಿಗೆ ಚಿತ್ರಹಿಂಸೆ ಕೊಟ್ಟು ಬ್ಯಾಂಕ್ ಅಕೌಂಟ್ ನಲ್ಲಿರುವ 4 ಲಕ್ಷ ಹಣವನ್ನ ಕೊಡುವಂತೆ ಇನ್ನಿಲ್ಲದೆ ಕಾಡಿಸಿದ್ದಾಳೆ. ಇಷ್ಟಾದರೂ ಚೆಕ್ಕಿಗೆ ಸಹಿ ಹಾಕಲು ಬಾಲಕಿ ನಿರಾಕರಿಸಿದ್ದಕ್ಕೆ ಇಸ್ತ್ರಿ ಪೆಟ್ಟಿಗೆಯಿಂದ ಬಾಲಕಿಯ ತೊಡೆಯನ್ನ ಸುಟ್ಟಿದ್ದಾರೆ. ತಾಯಿ ನಂಜಮ್ಮಳ ಈ ಪೈಶಾಚಿಕ ಕೃತ್ಯಕ್ಕೆ ಮಗ ಬಸವರಾಜು ಕೂಡ ಸಾಥ್ ಕೊಟ್ಟಿದ್ದಾನೆ.
ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆ ಇಟ್ಟಾಗ ಬಾಲಕಿಯ ಕಿರುಚಾಟ ಕೇಳಿಸಬಾರದು ಎಂದು ಬಾಲಕಿಯ ಬಾಯನ್ನ ಬಿಗಿಯಾಗಿ ಹಿಡಿದು ಹೀನ ಕೆಲಸಕ್ಕೆ ಜೊತೆಯಾಗಿದ್ದಾನೆ. ಈ ವೇಳೆ ಬಾಲಕಿಗೆ ಟೀ ಚೆಲ್ಲಿದೆ ಎಂದು ಸುಳ್ಳು ಹೇಳುವ ಮೂಲಕ ಬಾಲಕಿ ದೊಡ್ಡಮ್ಮ ಹೆದರಿಸಿದ್ದಾಳೆ. ಇನ್ನೂ ಬಾಲಕಿಗೆ 4 ಲಕ್ಷ ಹಣ ಬಂದಿದ್ದು ಹೇಗೆ ಅಂದ್ರೆ.. ಕಳೆದ ಮೂರು ವರ್ಷಗಳ ಹಿಂದೆ ಅನಾರೋಗ್ಯದಿಂದ ತಾಯಿಯನ್ನ ಕಳೆದುಕೊಂಡಿದ್ದ ಬಾಲಕಿಗೆ ತಾಯಿ ತವರು ಮನೆಯವರು ಜಮೀನಿನ ವಿಚಾರವಾಗಿ, ಬಾಲಕಿ ಹಾಗೂ ತಾಯಿಯ ಜಂಟಿ ಅಕೌಂಟ್ ಗೆ 4 ಲಕ್ಷ ಹಣ ಬಂದಿತ್ತು. ಈ ಹಣ ಲಪಟಾಯಿಸಲು ಬಾಲಕಿ ದೊಡ್ಡಮ್ಮ ಹಾಗೂ ದೊಡ್ಡಮ್ಮನ ಮಗ ಬಸವರಾಜು ಹೊಂಚು ಹಾಕಿದ್ದರು. ಅದೃಷ್ಟವಶಾತ್ ಕೃತ್ಯ ಬಯಲಾಗಿದೆ.
ಹಣಕ್ಕಾಗಿ ದೊಡ್ಡಮ್ಮಳಿಂದ ರಾಕ್ಷಸಿ ಕೃತ್ಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಡವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯ ಎಸಗಿದ ನಂಜಮ್ಮ ಕೃತ್ಯಕ್ಕೆ ಸಹಕರಿಸಿದ ಆತನ ಮಗ ಬಸವರಾಜು ವಿರುದ್ಧ ಎಫ್ ಐಆರ್ ಹಾಕಿದ್ದಾರೆ. ಅವಮಾನವೀಯ ಕೃತ್ಯಕ್ಕೆ ಒಳಗಾದ ಬಾಲಕಿ ತಾಯಿ ನರಸಮ್ಮ ಅವರ ಅಕ್ಕ ಈ ನಂಜಮ್ಮ ಕೇವಲ ಹೆಸರಿಗಷ್ಟೇ ನಂಜಮ್ಮಳಾಗದೆ ಬಾಲಕಿಯ ಬಾಳಲ್ಲಿ ಕಾಸಿಗಾಗಿ ನಂಜು ಕಾರುವ ಮಹಿಳೆ ಆಗಿದ್ದಾಳೆ … ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು.