ತುಮಕೂರು : ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಪತನವಾಗಿದೆ. ಎಂಬುದು ಬಿಜೆಪಿಯ ಹಗಲು ಗನಸು. ಇದಕ್ಕೆ ಜೆಡಿಎಸ್ ಕೂಡ ಹೊರತಾಗಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಗಣರಾಜ್ಯೋತ್ಸವ ಆಚರಣೆ ಬಳಿಕ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಆಗಲಿ, ನಾವು ನಮ್ಮ ಪಕ್ಷಕ್ಕೆ ಬರುವಾಗ ಅದ್ದೂರಿಯಾಗಿ ಸ್ವಾಗತ ಮಾಡಿದ್ದೆವು. ನನ್ನನ್ನು ಸರಿಯಾಗಿ ಬಿಜೆಪಿಯವ್ರು ನಡೆಸಿಕೊಂಡಿಲ್ಲ ಅಂತೆಲ್ಲಾ ಹೇಳಿ ಪಕ್ಷಕ್ಕೆ ಬಂದಿದ್ದರು. ಪಕ್ಷಕ್ಕೆ ಅವರು ಬಂದ ಬಳಿಕ ಕಾಂಗ್ರೆಸ್ನಲ್ಲಿ ಅವರಿಗೆ ಗೌರವಯುತವಾಗಿ ನಡೆಸಿಕೊಂಡಿದ್ದೇವು. ವಿಧಾನಸಣಾ ಚುನಾವಣೆಯಲ್ಲಿ ಅವರಿಗೆ ಅವಕಾಶ ಕಲ್ಪಿಸಿದ್ದೆವು. ಮುಖ್ಯಮಂತ್ರಿಯಾಗಿದ್ದವರು ಸೋಲಬಾರರು ಆದರೂ ಸೋತರು. ಇದು ಅವರಿಗೆ ಜನ ಬೆಂಬಲ ಇಲ್ಲ ಅಂತಾ ಗಿತ್ತಾಗುತ್ತದೆ. ಆದರೂ ಅವರು ಸಿಎಂ ಆಗಿದ್ದವರು ಎಂದು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದವು. ಆದ್ರೆ ಬಿಜೆಪಿಯನ್ನು ಬೈದವರು ಮತ್ತೆ ವಾಪಸ್ ಹೋಗಿದ್ದಾರೆ ಎಂದರೆ ಯಾಕೆ ಹೋಗಿದ್ದಾರೆ ಎಂದು ಗೊತ್ತಿಲ್ಲ ಎಂದರು.
ಜಗದೀಶ್ ಶೆಟ್ಟರ್ ಹೋಗಿರುವುದಕ್ಕೆ ಟೀಕೆ ಟಿಪ್ಪಣಿ ಮಾಡಲ್ಲ. ನಮಗೆ ಲಾಭನೂ ಇಲ್ಲ. ನಷ್ಟನೂ ಇಲ್ಲ. ಅವರನ್ನು ಲಾಭ ಆಗುತ್ತದೆ ಅಂತಾನೆ ಕರೆಸಿಕೊಂಡಿದ್ದೆವು. ಆದ್ರೆ ಸೋತರಲ್ಲ ಆದರಿಂದ ನಮಗೆ ನಷ್ಟ ಆಯಿತಲ್ಲ ಎಂದರು.