ತುಮಕೂರು : ಕುಣಿಗಲ್ ನಿಂದ ತುಮಕೂರಿಗೆ ತೆರಳುತ್ತಿದ್ದ ಖಾಸಗಿ ಬಸ್​ನಲ್ಲಿ ಪ್ರಯಾಣಿಕನೊಬ್ಬ ಆಸಿಡ್ ಸಾಗಿಸುತ್ತಿದ್ದ, ಇದ್ದಕ್ಕಿದ್ದ ಹಾಗೆ ಆಸಿಡ್ ಸಿಡಿದಿದೆ. ಸಿಡಿದ ಪರಿಣಾಮ ಸಹ ಪ್ರಾಯಾಣಿಕರಿಗೆ ಭಾರಿ ಗಾಯಗಳಾಗಿವೆ. ಗಾಯಗೊಂಡ ವ್ಯಕ್ತಿಗಳನ್ನ ನಾಜಿಯಾ ಸುಲ್ತಾನ (30) ರಾಜಲಕ್ಷ್ಮಿ (45) ಎಂದು ತಿಳಿದು ಬಂದಿದೆ.

ಈಗಾಗಲೇ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ನೆಡೆದಿರುವುದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ .

By admin

Leave a Reply

Your email address will not be published. Required fields are marked *

Verified by MonsterInsights