Thursday, May 1, 2025
25.2 C
Bengaluru
LIVE
ಮನೆUncategorizedತುಂಡು ಬಟ್ಟೆಗಿಲ್ಲ ಟೆಂಪಲ್ ಎಂಟ್ರಿ.. ಜಿಮ್ ಬಾಡಿಗೂ ನೋ ಎಂಟ್ರಿ..!?

ತುಂಡು ಬಟ್ಟೆಗಿಲ್ಲ ಟೆಂಪಲ್ ಎಂಟ್ರಿ.. ಜಿಮ್ ಬಾಡಿಗೂ ನೋ ಎಂಟ್ರಿ..!?

ತುಂಡು ಬಟ್ಟೆ ಹಾಕೊಂಡು ಅರೆಬರೆ ಟಿ ಶರ್ಟ್ ತೊಟ್ಟು ರೀಲ್ಸ್ ಮಾಡ್ತೀರಾ ,ಜಿಮ್ಮಿಗೊಗೋ ಹುಡುಗ್ರು ಬಟನ್ ಹಾಕದ ಟೈಟ್ ಶರ್ಟ್ ತೊಟ್ಟು ದೇವಸ್ಥಾನಕ್ಕೆ ಹೋಗ್ತಾ ಇದ್ದೀರಾ ಹಾಗಾದ್ರೆ ಹುಷಾರ್ ತುಂಡು ಬಟ್ಟೆಗಿಲ್ಲ ದೇವಸ್ಥಾನ ಪ್ರವೇಶ ಜಿಮ್ ಬಾಡಿನೂ ತೋರಿಸಂಗಿಲ್ಲ ಹೌದು ದೇವಸ್ಥಾನಗಳಲ್ಲಿ ಸಾತ್ವಿಕ ಬಟ್ಟೆ ಧರಿಸಿಬರಬೇಕೆಂಬ ಅಭಿಯಾನವನ್ನು ಕರ್ನಾಟಕ ದೇವಸ್ಥಾನ ಮಹಾಸಭಾ ಹಾಗೂ ಹಿಂದೂ ಜನಜಾಗೃತ ಸಮಿತಿ ಎಂಬ ಎರಡು ಸಂಘಟನೆಗಳು ಆರಂಭಿಸಿವೆ.

 

ಇದರ ಮೊದಲ ಭಾಗವಾಗಿ ರಾಜಧಾನಿ ಬೆಂಗಳೂರಿನ ವಸಂತ ನಗರದ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಈ ಕುರಿತಂತೆ ಸೂಚನಾ ಫಲಕವನ್ನ ಹಾಕಲಾಗಿದೆ. ಅದರಂತೆ, ಪುರುಷರು ಹಾಗೂ ಸ್ತ್ರೀಯರು , ಹರಿದ ಫ್ಯಾಷನ್ ನ ಜೀನ್ಸ್ ಪ್ಯಾಂಟ್ ಗಳು, ಬರ್ಮುಡಾ, ಶಾರ್ಟ್ಸ್, ತ್ರೀ ಫೋರ್ತ್ ಅಥವಾ ಬಿಗಿಯಾದ ಟಿ- ಶರ್ಟ್ ಗಳನ್ನು ಧರಿಸಬಾರದೆಂದು ಸೂಚಿಸಲಾಗಿದೆ. ಶೀಘ್ರದಲ್ಲೇ ಇಡೀ ಬೆಂಗಳೂರಿನ ಎಲ್ಲಾ ದೇವಸ್ಥಾನಗಳಲ್ಲಿ ಹಾಗೂ ಮುಂದೆ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಈ ರೀತಿಯ ಸೂಚನಾ ಫಲಕಗಳನ್ನು ಹಾಕಲು ಸಂಘಟನೆಗಳು ಚಿಂತನೆ ನಡೆಸಿವೆ.

ಆಧ್ಯಾತ್ಮಿಕ ಚಿಂತನೆಗಳು ಮಾನವೀಯ ಮೌಲ್ಯಗಳು ಸಿಗುವ ಕೇಂದ್ರಗಳಲ್ಲಿ ಈ ರೀತಿಯ ವಸ್ತ್ರಧಾರಣೆ ಭಕ್ತಾದಿಗಳಿಗೆ
ಉದ್ಯಾನ ನಗರಿಯಲ್ಲಿರುವ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲು ಕೆಲವು ಧಾರ್ಮಿಕ ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂದು ಹೇಳಲಾಗಿದೆ. ಈ ಕುರಿತಂತೆ ಜ. 10ರಿಂದ ಜನಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ.
ಸಾತ್ವಿಕ ಬಟ್ಟೆಗಳನ್ನು ಮಾತ್ರ ಧರಿಸಿ ದೇವಸ್ಥಾನಕ್ಕೆ ಬರುವಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗುತ್ತಿದೆ. ಕೆಲವು ದೇವಸ್ಥಾನಗಳಲ್ಲಿ ಈ ಕುರಿತಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಸೂಚನೆಯನ್ನು ಮೀರಿ ಬೇಕಾಬಿಟ್ಟಿ ಬಟ್ಟೆ ಧರಿಸಿ ಬರುವವರಿಗೆ ದೇವಸ್ಥಾನದೊಳಕ್ಕೆ ಪ್ರವೇಶ ನೀಡದಿರಲು ನಿರ್ಧರಿಸಲಾಗಿದೆ.

ಯಾರಿಂದ ವಸ್ತ್ರಸಂಹಿತೆ ಜಾರಿ?
ಕರ್ನಾಟಕ ದೇವಸ್ಥಾನ ಮಹಾಸಭಾ ಹಾಗೂ ಹಿಂದೂ ಜನಜಾಗೃತ ಸಮಿತಿ ಎಂಬ ಎರಡು ಧಾರ್ಮಿಕ ಸಂಘಟನೆಗಳು ಈ ರೀತಿಯ ಅಭಿಯಾನವನ್ನು ಆರಂಭಿಸಿವೆ. ಈ ಸಂಘಟನೆಗಳ ಪದಾಧಿಕಾರಿಗಳು ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಗಳ ಸದಸ್ಯರನ್ನು ಭೇಟಿ ಮಾಡಿ ತಮ್ಮ ಜನಜಾಗೃತಿಯ ಉದ್ದೇಶವನ್ನು ಮನವರಿಕೆ ಮಾಡಿದ್ದಾರೆ. ಅದರ ಫಲವಾಗಿ, ಕೆಲವು ದೇವಸ್ಥಾನಗಳಲ್ಲಿ ಈಗಾಗಲೇ ವಸ್ತ್ರಸಂಹಿತೆ ಕುರಿತಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಎಂದು ಖಾಸಗಿ ಸುದ್ದಿ ಜಾಲತಾಣವೊಂದು ವರದಿ ಮಾಡಿದೆ.

ಸೂಚನಾ ಫಲಕಗಳಲ್ಲೇನಿದೆ?
ಪುರುಷರು, ಹರಿದ ಫ್ಯಾಷನ್ ಉಳ್ಳ ಜೀನ್ಸ್ ಪ್ಯಾಂಟ್, ಶರ್ಟ್ಸ್, ಬರ್ಮುಡಾ, ತ್ರೀ ಫೋರ್ತ್ ಹಾಕಿಕೊಂಡು ದೇವಸ್ಥಾನಕ್ಕೆ ಬರುವಂತಿಲ್ಲ. ಮಹಿಳೆಯರು ಸಹ ಹರಿದ ಜೀನ್ಸ್ ಪ್ಯಾಂಟ್ ಅಥವಾ ಶರ್ಟ್, ಎದೆಯ ಭಾಗವನ್ನು ಹೈಲೈಟ್ ಮಾಡುವಂಥ ಬಿಗಿ ಟಿಶರ್ಟ್ ಗಳು ಹಾಗೂ ಇನ್ನಾವುದೇ ಅತಿರೇಕದ ಫ್ಯಾಷನ್ ಉಡುಪುಗಳನ್ನು ಧರಿಸಿ ಬರುವಂತಿಲ್ಲ ಅನ್ನೋ ಸೂಚನೆಯನ್ನ ಕೊಡಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments