ಮಂಡ್ಯ ಲೋಕಾಸಭಾ ಕ್ಷೇತ್ರದ ಟಿಕೇಟ್ ಕಗ್ಗಂಟು ಬಿಡಿಸಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇನ್ನಿಲ್ಲದ ಕಸರತ್ತು ಮಾಡ್ತಾ ಇದ್ದಾರೆ. ಇಂದು ಸುಮಲತಾ ನಿವಾಸಕ್ಕೆ ಭೇಟಿ ಮಾಡಿದ ವಿಜಯೇಂದ್ರ ಮಹತ್ವದ ಮಾತುಕತೆ ನಡೆಸಿದ್ರು. ಭೇಟಿ ಬಳಿಕ ಮಾತನಾಡಿದ ಸುಮಲತಾ, ವಿಜಯೇಂಧ್ರ, ಪ್ರೀತಂಗೌಡ ಒಂದು ಗಂಟೆಗಳ ಕಾಲ ಬಂದು ಮಾತಾಡಿದ್ರು. ಅವರ ಭಾವನೆಯನ್ನು ಹೇಳಿದ್ದಾರೆ. ಪಕ್ಷಕ್ಕೆ ನೀವು ಸೇರ್ಪಡೆಯಾಗಬೇಕು ಅಂತ ಹೇಳಿದ್ರು. ನಾಳೆ ಬೆಂಬಲಿಗರು ಬರ್ತಿದ್ದಾರೆ. ಅವರ ಭಾವನೆಯನ್ನು ಕೇಳಬೇಕಾದ ಕರ್ತವ್ಯವಿದೆ. ನಾನು ಕಾರ್ಯಕರ್ತರ ಭಾವನೆ ಕೇಳಿ ಮಂಡ್ಯದಲ್ಲಿ ನಿಲುವನ್ನು ತಿಳಿಸ್ತಿನಿ. ಬಿಜೆಪಿಗೆ ಸಪೋರ್ಟ್ ಅನ್ನೊದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಬೆಂಬಲಿಗರು ಎನು ಹೇಳುತ್ತಾರೆ ಅನ್ನೊದನ್ನು ಕೇಳಬೇಕು.ಮಂಡ್ಯಗೆ ಹೋಗಿ ಅವರ ಮುಂದೆನೆ ನಿಲುವನ್ನು ಸ್ಪಷ್ಟಪಡಿಸುತ್ತೇನೆ.
ಸುಲಭವಾಗಿ ಗೆಲ್ಲುವ ಕ್ಷೇತ್ರದ ಆಫರ್ ಇತ್ತು. ಜೊತೆಗೆ ಬೇರೆ ಪಕ್ಷದಿಂದಲೂ ಆಪರ್ ಇತ್ತು. ಅದಕ್ಕೆ ಮಂಡ್ಯ ಬಿಟ್ಟರೇ ಮತ್ತೆಲ್ಲೂ ಹೋಗುತ್ತಿಲ್ಲ.ನನ್ನ ಅಸ್ತಿತ್ವ ಅಂದ್ರೆ ಮಂಡ್ಯ. ಅದನ್ನ ಕಳೆದುಕೊಳ್ಳಲು ಕಷ್ಟಪಡಲ್ಲ, ಅವರಿಗೆ ಹೋಗಿದೆ ಎಂಬ ಬಗ್ಗೆ ಮಾತಾಡಲ್ಲ. ನಾವು ಉಳಿಸಿಕೊಂಡಿದ್ರೆ ಒಳ್ಳೆದಿತ್ತು ಎಂದು ಸಮಲತಾ ಅಭಿಪ್ರಾಯ ಪಟ್ಟರು.
ಇದೇ ವೇಳೆ ಇದು ಅಂಬರೀಶ್ ಮನೆ. ಯಾರೇ ಬಂದ್ರೂ ಸ್ವಾಗತ. ಮೈಶುಗರ್ ವಿಚಾರದಲ್ಲಿ ಕಾರ್ಯ ಆರಂಭ ಮಾಡಿದಾಗ ನಾರಾಯಣಗೌಡ ಸಚಿವರಾಗಿರಲಿಲ್ಲ. ಅವರ ಬೆಂಬಲ ಇಲ್ಲ ಅಂತಲ್ಲ, ಯಡಿಯೂರಪ್ಪ ಅವರು ಸಹಕಾರ ಕೊಟ್ಟರು. ಬೊಮ್ಮಾಯಿ ಕೂಡ ಬೆಂಬಲಿಸಿದ್ರು. ಬೇರೆ ಅಫರ್ ಎನು ಕೊಟ್ಟಿಲ್ಲ, ಆ ತರ ಕೇಳಿ ಪಡೆಯುವ ಅಭ್ಯಾಸ ಇಲ್ಲ. ಇದ್ದಿದ್ರೆ ನಾವು ಮುಂದೆ ಇರುತ್ತಿರಲಿಲ್ಲ ಎಂದು ತಮ್ಮ ನಿಲುವನ್ನು ಸುಮಲತಾ ಸ್ಪಷ್ಟಪಡಿಸಿದ್ರ.ಇನ್ನೂ ಇದೇ ವೇಳೆ ಮಾತನಾಡಿದ ವಿಜಯೇಂದ್ರ ,ಸಮಲತಾ ನರೇಂದ್ರ ಮೋದಿ ನಾಯಕತ್ವ ಒಪ್ಪಿದ್ದಾರೆ .ಮಂಡ್ಯದಲ್ಲೂ ಅವರು ಸಹಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ..


