ರಾಜಕೀಯರಾಜ್ಯಸುದ್ದಿ

ಏಪ್ರಿಲ್ 1 ರಂದು ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ

ದಿನೇ ದಿನೇ ಮಂಡ್ಯ ಚುನಾವಣಾ ಕಣ ರಂಗೇರುತ್ತಿದೆ. ಮಂಡ್ಯ ಕ್ಷೇತ್ರಾದ್ಯಂತ ಸಂಚಲ ಮೂಡಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಏಪ್ರಿಲ್ 1 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಏಪ್ರಿಲ್ 1ರಂದು ಸ್ಟಾರ್ ಚಂದ್ರು ಅವರು ಪಕ್ಷದ ಮುಖಂಡರು ಹಾಗು ಅಪಾರ ಕಾರ್ಯಕರ್ತರೊಂದಿಗೆ ಬೆಳಗ್ಗೆ 9.30 ರ ಸುಮಾರಿಗೆ ಶ್ರೀ ಕಾಳಿಕಾಂಬಾ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಏಪ್ರಿಲ್ 1 ರಂದು ನಾಮಪತ್ರ ಸಲ್ಲಿಕೆ ನಂತರ ಪಕ್ಷದ ಸ್ಥಾನ ಗೆಲ್ಲುವ ತಂತ್ರಗಳ ಕುರಿತು ವಿವರವಾದ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಕೈ ಅಭ್ಯರ್ಥಿ ಗೆಲುವಿಗೆ ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ಉದಯ್, ರವಿ, ರಮೇಶ್ ಬಂಡಿಸಿದ್ದೇಗೌಡ, MLC ಗೂಳಿಗೌಡರ ತಂಡ ಕಾರ್ಯತಂತ್ರ ರೂಪಿಸುತ್ತಿದೆ.

Comments (0)

Your email address will not be published. Required fields are marked *

Back to top button