Top News

ರಷ್ಯಾದಲ್ಲಿ ಮುಂಬೈ ಮಾದರಿ ದಾಳಿ; ರಕ್ತದೋಕುಳಿ

ಸುದೀರ್ಘ ಯುದ್ಧದಿಂದ ಜರ್ಜರಿತ ಆಗಿರುವ ರಷ್ಯಾಗೆ ಈಗ ಭಯೋತ್ಪಾದಕರು ಮುಳುವಾಗ್ತಿದ್ದಾರೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಮುಂಬೈ ಮಾದರಿ ಭಯೋತ್ಪಾದಕ ದಾಳಿ ನಡೆದಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ಘನಘೋರ ದಾಳಿಯಲ್ಲಿ ಕನಿಷ್ಠ 60 ಮಂದಿ ಬಲಿಯಾಗಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಹೆಚ್ಚಬಹುದು ಎಂದು ಹೇಳಲಾಗಿದೆ.

ಮಾಸ್ಕೋ ಹೊರವಲಯದ ಕ್ರಕ್ಸ್ ಸಿಟಿ ಕನ್ಸರ್ಟ್ ಹಾಲ್​ನಲ್ಲಿ ನಡೆದ ಪ್ರಮುಖ ರಷ್ಯನ್ ರಾಕ್​ ಬ್ಯಾಂಡ್​ ಫಿಕ್​ನಿಕ್ ಸಂಗೀತ ಕಾರ್ಯಕ್ರಮ ಆಸ್ವಾದಿಸಿ ಮರಳುತ್ತಿದ್ದ ಸಂಗೀತಪ್ರಿಯರ ಮೇಲೆ ಸೈನಿಕರ ವೇಷದಲ್ಲಿ ಬಂದ ನಾಲ್ಕಾರು ಉಗ್ರರು ಮನಸೋಇಚ್ಛೆ ಗುಂಡಿನಮಳೆಗೆರೆದಿದ್ದಾರೆ. ಸಿಕ್ಕ ಸಿಕ್ಕ ಕಡೆ ಬಾಂಬ್ ಎಸೆದಿದ್ದಾರೆ. ಯಾರಿಗೆ ಏನಾಗುತ್ತಿದೆ ಎಂದು ಅರ್ಥವಾಗುವುದರ ಒಳಗೆ ರಕ್ತದ ಹೊಳೆಯೇ ಹರಿದಿತ್ತು. ಭಯಭೀತಗೊಂಡ ಜನ ಸೀಟಿನ ಪಕ್ಕ ಕುಳಿತು ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ, ನಿರ್ದಯಿ ಉಗ್ರರು ಬಿಡಲೇ ಇಲ್ಲ. ಮನಸೋ ಇಚ್ಛೆ ಗುಂಡಿನ ಮಳೆಗೆರೆದು ಎಲ್ಲರನ್ನು ಕೊಲ್ಲುವ ಕೆಲಸ ಮಾಡಿದ್ದಾರೆ.

ಅತೀ ಸಮೀಪದಿಂದ ಉಗ್ರರು ಮಷಿನ್ ಗನ್ ಹಿಡಿದು ಗುಂಡಿನ ಮಳೆಗೆರೆಯುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಒಂದೊಂದು ದೃಶ್ಯವೂ ಭಯಾನಕವಾಗಿದೆ.

ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ದಿಗ್ಬ್ರಾಂತಿ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೇ ಪುಟಿನ್ ದೇಶದ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು. ಈ ಸಂದರ್ಭದಲ್ಲಿಯೇ ಘನಘೋರ ದಾಳಿ ನಡೆದಿರುವುದು ಗಮನಾರ್ಹ. ರಷ್ಯಾದ ನ್ಯಾಷನಲ್ ಗಶರ್ಡ್​ ಪಡೆಗಳು ಉಗ್ರರ ಬೇಟೆಗೆ ಮುಂದಾಗಿವೆ.

ಈ ದಾಳಿ ನಮ್ಮದೇ ಕೃತ್ಯ ಎಂದು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಘೋಷಿಸಿಕೊಂಡಿದೆ. ಮಾಸ್ಕೋ ಹೊರವಲಯದಲ್ಲಿ ನಮ್ಮ ಗುಂಪಿನ ಸದಸ್ಯರು ಅತೀದೊಡ್ಡ ದಾಳಿ ನಡೆಸಿದ್ದಾರೆ. ನಂತರ ಸುರಕ್ಷಿತವಾಗಿ ತಮ್ಮ ಸ್ಥಾವರವನ್ನು ಸೇರಿಕೊಂಡಿದ್ದಾರೆ ಎಮದು ಟೆಲಿಗ್ರಾಂ ಮೂಲಕ ಐಸಿಸ್ ಸಂದೇಶ ರಿಲೀಸ್ ಮಾಡಿದೆ

 

Comments (0)

Your email address will not be published. Required fields are marked *

Back to top button