ರಾಮನಗರ: ಡಿಕೆ ಬ್ರದರ್ಸ್ ಸಿದ್ದರಾಮಯ್ಯನವರನ್ನ ಬರಿ ಕಟ್ಟಾಕಿಲ್ಲ, ಸಿದ್ದರಾಮಯ್ಯ ನವರ ಗೋಳು ಹೇಳಿಕೊಳ್ಳಲೂ ಆಗ್ತಿಲ್ಲ,1ಈ ಅಣ್ಣತಮ್ಮಂದಿರ ಕಂಡ್ರೆ ಹೆದರಿಕೊಳ್ತಾರೆ. ಯಾಕೆ ಹೆದರಿಕೊಳ್ತಾರೋ ಗೊತ್ತಿಲ್ಲಾ.? ಅವರಿಗೆ ಕುರ್ಚಿ ಭಯವೋ, ಅಥವಾ ಇನ್ಯಾವ ಭಯ ಇದ್ಯೋ ಗೊತ್ತಿಲ್ಲ ಎಂದು ಡಿಕೆ ಬ್ರದರ್ಸ್ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಿಡಿಕಾರಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಬಾಗ ವಕೀಲರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆ ಆಲಿಸಿದ ನಂತರ ಮಾತನಾಡಿದ ಅವರು ಜಿಲ್ಲೆಯ ಅಧಿಕಾರಿಗಳು ಡಿಕೆ ಬ್ರದರ್ಸ್ ದಬ್ಬಾಳಿಕೆ ಧಮ್ಕಿಗೆ ಬೆಂಡಾಗಿ ಹೋಗಿದ್ದಾರೆ. ಈ ಜಿಲ್ಲೆಗೆ ಬರಲು ಅಧಿಕಾರಿಗಳು ಹೆದರುತ್ತಾರೆ. ಅಲ್ಲದೆ ಇಲ್ಲಿ ಇರುವವರು ಡಿಕೆ ಬ್ರದರ್ಸ್ ಹೇಳಿದ ಹಾಗೆ ಕೇಳಿಕೊಂಡು ಇದ್ದಾರೆ ಈ ಪ್ರಕರಣದಲ್ಲಿ ಜಿಲ್ಲಾ ಎಸ್ಪಿ ಮನಸ್ಸು ಮಾಡಿದ್ರೆ ಅರ್ಧ ಗಂಟೆಯಲ್ಲಿ ಕೆಲಸ ಆಗ್ತಿತ್ತು ಆದರೆ ಅವರು ಹೇಳಿದ ಹಾಗೆ ಕೇಳಿಕೊಂಡು ಸುಮ್ಮನಿದ್ದಾರೆ ಇದು ಸರಿಯಲ್ಲ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿದ್ದವರು. ಅವರು ವಕೀಲ ವೃತ್ತಿ ಮಾಡಿದವರು, ಈಗ ವಕೀಲರನ್ನ ಬೀದಿಗೆ ಬಿಟ್ಟು ಸಿಎಂ ಕುರ್ಚಿ ಯಲ್ಲಿ ಕೂರೋದು ನ್ಯಾಯ ಅಲ್ಲ ಆದ್ದರಿಂದ ಡಿಕೆಶಿಗೆ ಬುದ್ದಿ ಹೇಳಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿ ಎಂದ ಅವರು ಕೂಡಲೇ ಸಿಎಂ ಸಿದ್ದರಾಮಯ್ಯ ಮಧ್ಯಪ್ರದೇಶ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ವಕೀಲರ ಸಮಸ್ಯೆ ಆಲಿಸಿದ ಬಳಿಕ ಮಾಜಿ ಸಚಿವ ಸಿಪಿವೈ ಮಾತನಾಡಿ ಬಹಳ ಸಂದರ್ಭದಲ್ಲಿ ನ್ಯಾಯವಾದಿಗಳು ಮತ್ತು ಪೊಲೀಸರಿಗೆ ಸಂಘರ್ಷ ಏರ್ಪಡುತ್ತೆ. ಇಂತಹ ಕೆಲ ಘಟನೆಗಳನ್ನ ಇಟ್ಟುಕೊಂಡು ಇದನ್ನ ಹೇಗೆ ಬಗೆಹರಿಸಬೇಕು ಎಂಬುದನ್ನ ನ್ಯಾಯಾಲಯವೇ ಹೇಳಿದೆ.
ಅದಕ್ಕೂ ಕೆಲ ಕಾನೂನುಗಳಿವೆ. ಆದರೆ ಶಾಂತಿಯುವಾಗಿ ಬಗೆಹರಿಸಬೇಕಾದ ಹೋರಾಟ ಇದು. ಈ ಸಮಸ್ಯೆಯನ್ನ ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು ಯಾಕೆ ಬಗೆಹರಿಸಿಲ್ಲ.?ರಾತ್ರಿ ಕುಮಾರಸ್ವಾಮಿ ಅವರು, ಆರ್.ಅಶೋಕ್ ಅವ್ರು ಬಂದಿದ್ದಾರೆ. ಇದು ರಾಜಕೀಯ ಪ್ರೇರಿತ ಅಂತ ಡಿಕೆಶಿ ಹೇಳಿದ್ದಾರೆ. ನಮ್ಮ ಎಂಪಿಗೆ ಇದು ಅರ್ಥ ಆಗಬೇಕಿತ್ತು. ಅವರನ್ನ ಬಹಳ ಬುದ್ದಿವಂತ ಅಂತಾರೆ, ಆದರೆ ಅವರ ಶಿಷ್ಯ ಎಂಎಲ್‌ಎಯನ್ನ ರಕ್ಷಿಸಲು ಎಂಪಿ ಸುಮ್ಮನಿದ್ದಾರೆಯೇ, ಈಗ ವಕೀಲರನ್ನ ತಂದು ಬೀದಿಗೆ ನಿಲ್ಲಿಸಿದ್ದಾರೆ. ಇವರ ದುರಹಂಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಡಿಕೆ ಬ್ರದರ್ಸ್ ವಿರುದ್ಧ ಕಿಡಿಕಾರಿದರು.