ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಪ್ರಕರಣದಡಿ ಬಂಧನಕ್ಕೆ ಒಳಗಾಗಿದ್ದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಮೊಹಮದ್ ಶಫಿ ನಾಶಿಪುಡಿ, ಮುನಾವರ್ ಹಾಗೂ ಇಲ್ತಾಜ್ ಗೆ ಜಾಮೀನು ಸಿಕ್ಕಿದೆ. 39 ನೇ ಎಸಿಎಂಎಂ ಕೋರ್ಟ್ ನಿಂದ ಆದೇಶ ನೀಡಲಾಗಿದೆ.
ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ನ್ಯಾ.ವಿಜೇತ್ ಸಾಕ್ಷಿ ನಾಶ, ತನಿಖೆಗೆ ಸಹಕಾರ ಸೇರಿದಂತೆ ಹಲವು ಷರತ್ತುಗಳನ್ನು ತಿಳಿಸಿ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿಗಳ ಪರ ವಕೀಲ ಸುಬ್ರಹ್ಮಣ್ಯ ವಾದಿಸಿದ್ರು.