ಬೀದರ್ : ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ಹಾರಕೂಡ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್ ಶಾಸಕರ ಮಧ್ಯೆ ರಾಮ ಮಂದಿರ ವಿಚಾರಕ್ಕೆ ತುಂಬಿದ ಸಭೆಯಲ್ಲೇ ಬಿಜೆಪಿ- ಕಾಂಗ್ರೆಸ್ ಶಾಸಕರಾದ ಬಸವಕಲ್ಯಾಣ ಶಾಸಕ ಶರಣು ಸಲಗರ್, ಆಳಂದ ಶಾಸಕ ಬಿ.ಆರ್.ಪಾಟೀಲ್, ಹುಮನಾಬಾದ್ ಶಾಸಕ ಸಿದ್ದು ಪಾಟೀಲ ಮೂವರು ಶಾಸಕರ ನಡುವೆ ವಾಕ್ಸಮರ ನಡೆದಿದೆ..
ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀರಾಮ ಮಂದಿರ ಕುರಿತು ಮೊದಲು ಮಾತನಾಡಿದ ಶಾಸಕ ಶರಣು ಸಲಗರ್ ಅವರು, ಮೋದಿ ನೇತೃತ್ವದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ವಾಗ್ತಿದೆ, ಎಲ್ಲರೂ ಹಬ್ಬದ ರೀತಿ ಸಂಭ್ರಮಿಸಬೇಕು. ಕೋಟ್ಯಾನು ಹಿಂದೂಗಳ 500 ವರ್ಷಗಳ ಕನಸು ಈಡೇರಿದೆ ಎಂದು ಶಾಸಕ ಶರಣು ಸಲಗರ್ ಹೇಳಿದ್ದಾರೆ.
ಸಲಗರ್ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ ಬಿಆರ್ ಪಾಟೀಲ್ ಅವರು, ಧಾರ್ಮಿಕ ಕಾರ್ಯಕ್ರಮವನ್ನ ರಾಜಕೀಯವಾಗಿ ಬಳಸಿಕೊಳ್ಳಬಾರದು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲಾ ಎಂದು ಸಲಗರ್‌ಗೆ ಟಾಂಗ್ ಕೊಟ್ಟಿದ್ದಾರೆ.
ಬಿಆರ್ ಪಾಟೀಲ್ ಮಾತಿಗೆ ಎದುರೇಟು ಕೊಟ್ಟ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಅವರು, ಇದು ಧಾರ್ಮಿಕ ಕಾರ್ಯಕ್ರಮ ಇದೆ, ಧರ್ಮದ ಬಗ್ಗೆ ಮಾತನಾಡಿದ್ರೇ ಏನು ತಪ್ಪು…? ಧರ್ಮದ ಬಗ್ಗೆ ಮಾತನಾಡಿದ್ರೆ ಕೆಲವರಿಗೆ ಅರಗಿಸಿಕೊಳ್ಳೋಕೆ ಆಗೊಲ್ಲಾ.. ಅಂಥವರಿಗೆ ಏನು ಮಾಡೋಕಾಗಲ್ಲಾ.. ಎಂದು ಶಾಸಕರ ಹೆಸರು ಹೇಳದೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್‌ಗೆ ತಿರುಗೇಟು ನೀಡಿದ್ರು.
ಸಚಿವರಾದ ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಸಂಸದ ಉಮೇಶ ಜಾಧವ್ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.