ವಿಜಯನಗರ : ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಕರೆತರಲು ತೆರೆಮರೆ ಕಸರತ್ತು ನಡೆಯುತ್ತಿದ್ದು, ಜನಾರ್ದನ ರೆಡ್ಡಿ ಬಿಜೆಪಿ ಬಂದ್ರೆ ಸ್ವಾಗತ ಮಾಡುತ್ತೇನೆ. ರೆಡ್ಡಿ ಬಿಜೆಪಿಗೆ ಬರುತ್ತೇನೆ ಅಂದರೆ ನನ್ನ ಅಭ್ಯಂತರ ಇಲ್ಲ ಎಂದು ಹೊಸಪೇಟೆಯಲ್ಲಿ ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ಶ್ರೀರಾಮುಲುರನ್ನ ಬೆಳೆಸಿದ್ದು ನಾನೇ ಎಂದು ಕೊಪ್ಪಳದಲ್ಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು ಅವರು, ಜನಾರ್ದನ ರೆಡ್ಡಿ ನನ್ನ ಬೆಳೆಸಿದ್ದಷ್ಟೇ ಅಲ್ಲ..ನನಗೆ, ಅನ್ನ ಕೊಟ್ಟವರು.. ನನ್ನ ಮೇಲೆ ಜನಾರ್ದನ ರೆಡ್ಡಿ ಅನ್ನದ ಋಣ ಇದೆ. ಹೀಗೆ ಸ್ನೇಹಿತ ಜನಾರ್ದನ ರೆಡ್ಡಿ ಕುರಿತು ರಾಮುಲು ಮಾರ್ಮಿಕ ನುಡಿಯನ್ನಡಿದ್ದಾರೆ.
ಕಾಂಗ್ರೆಸ್ ಡೋಂಗಿ ರಾಜಕಾರಣ ಮಾಡ್ತಿದೆ
ಪ್ರಭು ಶ್ರೀರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ ಎಂಬ ಕಾಂಗ್ರೆಸ್ ನಾಯಕರ ಬಹಿರಂಗ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀ ರಾಮುಲು ಪ್ರತಿಕ್ರಿಯೆ ನೀಡಿದ್ದು, ರಾಮಂದಿರ ಧ್ವಂಸ ಮಾಡಿದ ಬಾಬರ್ ಸಮಾದಿಗೆ ಕೈ ಮುಗಿಯುತ್ತಾರೆ. ಪ್ರಭು ಶ್ರೀರಾಮ ಚಂದ್ರನ್ನ ವಿರೋಧ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹೊಸಪೇಟೆಯಲ್ಲಿ ಮಾಜಿ ಸಚಿವ ಶ್ರೀ ರಾಮುಲು ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ನೆಹರುನಿಂದ ಇಂದಿನ ರಾಹುಲ್ ಗಾಂಧಿವರೆಗೆ ರಾಮನನ್ನ ವಿರೋಧ ಮಾಡ್ತಾ ಬಂದಿದ್ದಾರೆ. ಅಂದು ಸೋಮನಾಥ ದೇಗುಲಕ್ಕೆ ವಿರೋಧ ಮಾಡಿದಂತೆ ರಾಮಮಂದಿರ ಬಹಿಷ್ಕಾರ ಮಾಡ್ತಿದ್ದಾರೆ. ಹಿಂದೂ ವಿರೋಧಿ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ರಾಮಮಂದಿರದಿಂದ ಮೋದಿಗೆ ಹೆಸರು ಬರುತ್ತೆ ಅಂತ ಕಾಂಗ್ರೆಸ್ ಡೋಂಗಿ ರಾಜಕಾರಣ ಮಾಡ್ತಿದೆ. ಇದನ್ನ ಸಾಕ್ಷಾತ್ ಪ್ರಭು ಶ್ರೀರಾಮ ಚಂದ್ರನೇ ನಂಬೋದಿಲ್ಲ ಎಂದು ಶ್ರಿರಾಮು ಹೊಸಪೇಟೆಯಲ್ಲಿ ಹೇಳಿದರು.
ಸಿದ್ದರಾಮಯ್ಯ ಒಬ್ಬ ನಾಸ್ತಿಕ
ಇನ್ನೂ.. ಜನವರಿ 22ಕ್ಕೆ ಮುಜರಾಯಿ ಇಲಾಖೆಯು ದೇಗುಲಗಳ ಪೂಜೆ ಮಾಡಿಸಬೇಕು ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಕೇಂದ್ರ ಸರ್ಕಾರದ ಆದೇಶದ ಬಗ್ಗೆ ನನಗೆ ಗೊತ್ತಿಲ್ಲ ಅಂತಿರೋ ಸಿದ್ದರಾಮಯ್ಯಗೆ ಬಹುಷ ಈ ಆದೇಶ ಹೊರಡಿಸಿದ್ದು ಅವರಿಗೆ ಗೊತ್ತಿಲ್ಲ ಅನಿಸುತ್ತದೆ. ಸಿದ್ದರಾಮಯ್ಯ ಒಬ್ಬ ನಾಸ್ತಿಕ, ದೇವಸ್ಥಾನಗಳಿಂದ ದೂರ ಇರ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.