ಬೆಂಗಳೂರು ಉತ್ತರ ಲೋಕಸಭೆ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಮೊದಲ ಬಾರಿಗೆ ಡಿವಿ ಸದಾನಂದಗೌಡ ಮಾಧ್ಯಮಗೋಷ್ಟಿ ನಡೆಸಿ ಮನದಾಳ ಹೊರಹಾಕಿದ್ದಾರೆ. ಕಳೆದ ಹಲವಾರು ದಿನಗಳಿಂದ ಸುದ್ದಿಗೋಷ್ಠಿ ಮಾಡ್ತಿನಿ ಅಂತ ಹೇಳಿದ್ದೆ. ಲೊಕಸಭಾ ಸೀಟು ಹಂಚಿಕೆ ನಂತ್ರ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಬಂತು..ಬೆಂಗಳೂರು ಉತ್ತರಕ್ಕೆ ಬದಲಿ ಹೆಸರು ಬಂದ ನಂತ್ರ ನನ್ನ ಬಗ್ಗೆ ಕುತೂಹಲ ಮೂಡಿಸಿದ್ದು ಪಕ್ಷದ ವರಿಷ್ಠರು ಟಿಕೆಟ್ ಸಿಗೋ ಬಗ್ಗೆ ಹೇಳುದ್ರು ಟಿಕೆಟ್ ಮಿಸ್ ಆದ ನಂತದ ನನ್ನ ನಡೆ ಏನು ಅಂತ ಸಾಕಷ್ಟು ಚರ್ಚೆ ಆಗಿತ್ತು.
ಹೌದು ನನಗೆ ಕಾಂಗ್ರೆಸ್ ನಿಂದ ಆಹ್ವಾನ ಬಂದಿದೆ. ನೀವು ಕಾಂಗ್ರೆಸ್ ಸೇರ್ತಿರಾ ಎಂಬ ನಿಮ್ಮ ಪ್ರಶ್ನೆಗೆ ನನ್ನ ಉತ್ತರ ಇಲ್ಲ. ನನ್ನ ಕೆಲಸ ಬಿಜೆಪಿ ಪಕ್ಷವನ್ನು ಶುಧ್ದೀಕರಣ ಮಾಡೊದು. ನನಗೆ ದುಃಖವಾಗಿದೆ ಬೇಸರವಾಗಿದೆ ನೋವಾಗಿದೆ ಅನ್ನೋದು ಹೌದು. ಸಹಿಸಿಕೊಳ್ಳುವವನಿಗೆ ತಾಳ್ಮೆ ಇದ್ದರೆ ನೋವು ಕೊಡುವವರು ಇದ್ದು ಸತ್ತಂತೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ..ನನ್ನ ವಿರೋಧಿಗಳು ಪಕ್ಷ ನನಗೆ ಎಲ್ಲಾ ಕೊಟ್ಟಿದೆ ನಾನು ಪಕ್ಷಕ್ಕೆ ಏನು ಕೊಡ್ತಾರೆ ಎಂಬಂತಹ ಟೀಕೆ ಟಿಪ್ಪಣಿಗಳು ಬಂದಿದ್ವು..
ನಾನು ಕುಗ್ಗೋದಿಲ್ಲ, ಜಗ್ಗೋದಿಲ್ಲ ನನಗೆ ಮೋದಿ ಮುಖ್ಯ.. ರಾಜ್ಯದಲ್ಲಿ ಮೋದಿ ಪರವಾದ ವಾತಾವರಣ ನಿರ್ಮಾಣ ಆಗಬೇಕು. ಮೋದಿಯವರು ಪರಿವರ್ತನೆಯ ನೇತಾರ. ಮೋದಿಯವರು ಮತ್ತೆ ಪ್ರಧಾನ ಮಂತ್ರಿ ಆಗಬೇಕು. 40%, ಕುಟುಂಬ ರಾಜಕಾರಣದಿಂದ ನಮ್ಮನ್ನ ದೂರ ಇಟ್ರು ಇದಾಗಬಾರದು. ಸದಾನಂದ ಗೌಡರು ಏನ್ ಮಾಡ್ತಾರೆ ಅಂತ ಕೇಳಬಹುದು. ಶುಧ್ದೀಕರಣಕ್ಕೆ ಚಾಲನೆ ಕೊಡೋದೆ ಸದಾನಂದ ಗೌಡ. ಪಕ್ಷದ ಜವಾಬ್ದಾರಿ ಹೊತ್ತವರೆಲ್ಲಾ ಸ್ವಲ್ಪ ಸ್ವಾರ್ಥಿಗಳಾಗಿದ್ದೆ ತಾವು , ತಮ್ಮ ಕುಟುಂಬದವರು, ಜಾತಿಯವರಿಗೆ ಮಾತ್ರ ಅಂತ ಜನ ಮಾತಾಡ್ತಾರೆ ಇದು ಬದಲಾಗಬೇಕು. ಮೋದಿಯವರ ಮೇರಾ ದೇಶ್, ಮೇರಾ ಪರಿವಾರ್ ಆಗಬೇಕು ಜಾತಿ ಸಮೀಕರಣ ಆಗಬೇಕು ಬಿಜೆಪಿ ಬೆಳೆಯಬೇಕು ಎಂದು ತಿಳಿಸಿದ್ರು