ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ವಿಚಾರಗಳ ಕುರಿತಂತೆ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಘಟನೆ ನಡೆದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಇವರಿನ್ನು ಸ್ಥಳ ಪರಿಶೀಲನೆಯನ್ನೇ ಮುಗಿಸಿಲ್ಲ. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಆದ್ರೆ ಎಫ್ ಐ ಆರ್ ನಲ್ಲಿ ಕೇವಲ ಇಬ್ಬರು ಗಾಯಾಳುಗಳ ಹೆಸರು ಮಾತ್ರ ದಾಖಲಾಗಿದೆ.
ಇನ್ನು ರಾಜ್ಯಸಭೆ ಚುನಾವಣೆ ಫಲಿತಾಂಶದ ದಿನ ಪಾಕಿಸ್ತಾನ ಪರ ಘೋಷಣೆ ಕೂಗಿದ್ರು ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಡುಗಿದ ಆರ್.ಅಶೋಕ್ ಎಫ್ ಎಸ್ ಎಲ್ ರಿಪೋರ್ಟ್ ಬಂದಿದೆ. ರಿಪೋರ್ಟ್ ಬಿಡುಗಡೆ ಮಾಡದೇ ಕಾಂಗ್ರೆಸ್ ರಾಜಕೀಯ ಮಾಡ್ತಾ ಇದೆ. ಒಂದು ವೇಳೆ ರಿಪೋರ್ಟ್ ಬಿಡುಗಡೆ ಮಾಡಿದ್ರೆ, ರಾಜ್ಯಸಭೆ ಸದಸ್ಯರ ಮೇಲೆ ಕ್ರಮವಾಗುವ ಭಯ ಕಾಂಗ್ರೆಸ್ ಪಕ್ಷಕ್ಕಿದೆ. ಯಾವ ವಿಚಾರವನ್ನ ಕಾಂಗ್ರೆಸ್ ನವರು ಯಾವುದನ್ನ ಡೈವರ್ಟ್ ಮಾಡೋಕೆ ನೋಡ್ತಾ ಇದ್ದಾರೋ ಗೊತ್ತಿಲ್ಲ.. ಎರಡು ಪ್ರಕರಣವನ್ನ ಕೂಡಲೇ ಎನ್ ಐ ಎ ತನಿಖೆಗೆ ವಹಿಸಲಿ, ಅವರು ಯಾರೇ ಆಗಿದ್ರು, ಎನ್ ಐಎ ಪತ್ತೆ ಹಚ್ಚಿ ಬಂಧಿಸಲಿದೆ ಎಂದರು.
ಕಾಂಗ್ರೆಸ್ ನವರು ತನಿಖೆ ಜವಾಬ್ದಾರಿಯನ್ನ ಕೇಂದ್ರಕ್ಕೆ ವಹಿಸಿದ್ರೆ, ಕ್ರೆಡಿಟ್ ಕೇಂದ್ರಕ್ಕೆ ಹೋದ್ರೆ, ಅನ್ನೋ ಭಯದಲ್ಲಿ ಕೇಸ್ ಹಳ್ಳ ಹಿಡಿಸೋಕೆ ಏನ್ ಬೇಕೋ ಅದು ಮಾಡ್ತಾ ಇದ್ದಾರೆ. ತನಿಖೆ ತನಿಖೆ ಅಂತಿದ್ರೆ, ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗ್ತಾರೆ. ತನಿಖೆಯಲ್ಲಿ ಕೇಂದ್ರದ ಸಹಕಾರ ಪಡೆದ್ರೆ ತಪ್ಪೇನು ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಎನ್ ಐ ಎ ಬಳಿ ಎಲ್ಲಾ ಉಗ್ರರ ಮಾಹಿತಿ ಇರುತ್ತೆ. ಬ್ಲಾಸ್ಟ್ ಗೆ ಬ್ಯಾಟರಿ ಬಳಸಲಾಗಿದೆ, ಇದೆಲ್ಲವನ್ನೂ ನೋಡ್ತಿದ್ರೆ, ಭಯೋತ್ಪಾದಕರ ಕೃತ್ಯ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದರು
ಇನ್ನು ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಆಮಿಷ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರು ಚಾಣಾಕ್ಷ ರಾಜಕಾರಣಿ..ಮುಖ ಎತ್ಕೊಂಡು ಓಡಾಡೋಕೆ ಆಗ್ತಿಲ್ಲ..ಈಎಲ್ಲಾ ಘಟನೆಗಳನ್ನ ಡೈವರ್ಟ್ ಮಾಡೋಕೆ 50ಕೋಟಿ ಆಮಿಷದ ಕಥೆ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದ್ರು.


