2024 ಲೋಕ ಸಮರಕ್ಕೆ ಇನ್ನೇನು ಕೆಲ ತಿಂಗಳಷ್ಟೆ ಬಾಕಿ ಇದೆ..ಇದೇ ಹೊತ್ತಲ್ಲಿ ಯಾರಿಗೆ ಟಿಕೇಟ್ ಸಿಗಬಹುದು ಅನ್ನೋ ಲೆಕ್ಕಚಾರಗಳು ಚರ್ಚೆಗೆ ಬಂದಿವೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದತ್ತ ಮುಖ ಮಾಡಿ ನೋಡಿದ್ರೆ, ಈ ನಳೀನ್ ಕುಮಾರ್ ಕಟೀಲ್ ಗೆ ಈ ಬಾರಿ ಟಿಕೆಟ್ ಇಲ್ವಾ.? ಎಂಬ ಪ್ರಶ್ನೆ ಎದುರಾಗಿದೆ.
ಕಟೀಲ್ ಕ್ಷೇತ್ರಕ್ಕೆ ಬರ್ತಾರಾ ನಿರ್ಮಲಾ ಸೀತಾರಾಮನ್.? ಎಂಬ ಟಾಕ್ ಬಲವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಿರ್ಮಲಾ ಕೇಂದ್ರ ಹಣಕಾಸು ಸಚಿವೆ ಸ್ಪರ್ಧೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕಟೀಲ್ಗೆ ಟಿಕೆಟ್ ಕೊಡಬೇಡಿ ಅಂತ ಸ್ವಪಕ್ಷದವರೇ ಆಗ್ರಹಿಸುತ್ತಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಬಿಜೆಪಿ ಕಾರ್ಯಕರ್ತರಿಂದಲೂ ವ್ಯಾಪಾಕ ವಿರೋಧ ವ್ಯಕ್ತವಾಗುತ್ತಿದೆ.
ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಅಧ್ಯಕ್ಷ ಹುದ್ದೆ ಕಳೆದುಕೊಂಡಿದ್ದ ಕಟೀಲ್ ಕರಾವಳಿಯಲ್ಲಿ ಬಿಜೆಪಿಗರ ವಿರೋಧ ಕಟ್ಟಿಕೊಂಡಿದ್ರು. ಇವರ ವಿರುದ್ಧ ದಕ್ಷಿಣ ಕನ್ನಡಕ್ಕೆ ಕಟೀಲ್ ಬೇಡ ಅಂತ ಅಭಿಯಾನ ನಡೆಸಲಾಗಿತ್ತು. ಇದೀಗ ರಾಜ್ಯಸಭೆ ಸದಸ್ಯೆ, ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ರೇಸ್ ಗೆ ಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ಸೀತಾರಾಮನ್ ಎಂಬ ಚರ್ಚೆ ಜೋರಾಗಿದೆ. ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಹೈಕಮಾಂಡ್ ಬಿಗ್ ಪ್ಲಾನ್ ಮಾಡುತ್ತಿದ್ದು, ಕೇಂದ್ರ ಸಚಿವರನ್ನ ಚುನಾವಣಾ ಕಣಕ್ಕೆ ಇಳಿಸುವುದರ ಹಿಂದೆಯೂ ರಣತಂತ್ರ ಅಡಗಿದೆ ಅನ್ನೋದು ಸುಳ್ಳಲ್ಲ.