Wednesday, April 30, 2025
29.2 C
Bengaluru
LIVE
ಮನೆರಾಜಕೀಯಪದವೀಧರರಿಗೆ ಸರ್ಕಾರ ಹಣದ ಬದಲು ಉದ್ಯೋಗ ನೀಡಲಿ: ವಾಟಾಳ್ ನಾಗರಾಜ್

ಪದವೀಧರರಿಗೆ ಸರ್ಕಾರ ಹಣದ ಬದಲು ಉದ್ಯೋಗ ನೀಡಲಿ: ವಾಟಾಳ್ ನಾಗರಾಜ್

ಮೈಸೂರು ; ರಾಜ್ಯ ಸರ್ಕಾರ ಪದವೀಧರರಿಗೆ ಹಣದ ಬದಲು ಉದ್ಯೋಗ ನೀಡಿಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ. ಕನ್ನಡಿಗರಿಗೆ ಉದ್ಯೋಗಕ್ಕಾಗಿ ಮತ್ತು ಹಿಂದಿ ಹೇರಿಕೆ ವಿರೋಧಿಸಿ ಮೈಸೂರಿನ ಜಯಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಉದ್ಯೋಗದಲ್ಲಿ ಮೊದಲು ಕನ್ನಡಿಗರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿದರು. ಹೋಟೆಲ್​ನಲ್ಲಿ ಕಾಫಿ, ಟೀ, ತಿಂಡಿ, ದೋಸೆ ಬೆಲೆಯೇ 150 ರೂಪಾಯಿ ಆಗಿದೆ. ನೀವು ಕೊಡುವ ದುಡ್ಡಿನಲ್ಲಿ ಅವರು ಕಾಫಿ ಕುಡಿಯಲು ಯೋಚನೆ ಮಾಡಬೇಕಾಗುತ್ತದೆ. ಮೂರು ಸಾವಿರ, ಒಂದೂವರೆ ಸಾವಿರ ನೀಡುವ ಮೂಲಕ ಪದವೀಧರರಿಗೆ ಅಗೌರವ ತೋರಲಾಗುತ್ತಿದೆ.

ವರ್ಷಕ್ಕೆ ಎಷ್ಟು ಜನ ಪದವೀಧರರಾಗುತ್ತಿದ್ದಾರೆ ಎಂಬ ಮಾಹಿತಿ ಇದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಪದವೀಧರರ ಸಮಸ್ಯೆ ಆಲಿಸಲು ಓಬ್ಬ ಸಚಿವರನ್ನ ನೇಮಕ ಮಾಡಿ. ಉನ್ನತ ಶಿಕ್ಷಣ ಮಾಡಲು ಕನ್ನಡಿಗರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಮಠಾಧೀಶರ ಕಾಲೇಜುಗಳಲ್ಲಿ ಹೊರಗಿನ ರಾಜ್ಯದವರಿಗೆ ಸೀಟು ಕೊಟ್ಟಿದ್ದೀರಿ. ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ಕನ್ನಡ ನಾಮಫಲಕಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧನ ಮಾಡಬಾರದಾಗಿತ್ತು. ಸರ್ಕಾರ ಬಂಧನ ಮಾಡಿದೆ, ಆದರೆ ಕೋರ್ಟ್​ ಬಿಡುಗಡೆ ಮಾಡುತ್ತಿದೆ. ಕನ್ನಡ ಬೋರ್ಡ್ ಹಾಕಿ ಅಂತಾ ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments