ಮಧುಗಿರಿ : ನಾನು ಆಸ್ತಿಕನೆ, ನಾಸ್ತಿಕನಲ್ಲ. ನನಗೆ ರಾಮನ ಮೇಲೆ ಭಕ್ತಿ ಇಲ್ಲ, ನಾವು ರಾಮನ ವಿರೋಧಿಗಳು ಎಂದು ಹೆಳುವುದು ಸರಿಯಲ್ಲ ಎಮದು ಸಹಕಾರ ಸಚಿವ ಕೆ.ಎಸ್ ರಾಜಣ್ಣ ಹೇಳಿದರು.
ದೊಡ್ಡೇರಿ ಹೋಬಳಿ ಕಿತ್ತಗಳ್ಳಿ ಗ್ರಾಮದ ಶ್ರೀರಾಮ ದೇವಸ್ಥಾನದಲ್ಲಿ ಸಚಿವ ರಾಜಣ್ಣ ಕುಟುಂಬ ಸಮೇತ ಹೋಮಹವನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದ ರಾಮನ ಮಾಡಲಿಕ್ಕೆ ಹೊರಟಿದ್ದಾರೆ. ನಿಜವಾದ ದಶರಥನ ಮಗ ರಾಮನನ್ನು ಮಾಡಬೇಕು. ಮೋದಿ ರಾಮನ ಮಾಡುವುದಿಲ್ಲ ಎಂದು ಟಾಂಗ್ ಕೊಟ್ಟರು.
ನಾನು ರಾಮನ ಪೂಜೆ ಮಾಡಬಹುದು ಇನ್ನೊಬ್ಬನನ್ನ ಪೂಜೆ ಮಾಡೋದು ಮತ್ತೊಂದು ವಿಚಾರ. ಈ ದೇವಸ್ಥಾನವನ್ನ ನಾನು 2006ರಲ್ಲಿ ಕಟ್ಟಿಸಿದ್ದೆ 30 ಲಕ್ಷ ರೂ ಖರ್ಚು ಮಾಡಿ ದೇವಾಲಯ ಕಟ್ಟಿಸಿದ್ದೆ. ಇವತ್ತಿನ ಲೆಕ್ಕದಲ್ಲಿ ಕೋಟಿಗಟ್ಟಲೆ ಬೆಲೆ ಹೇಳಿಕೊಳ್ಳಬಹುದು. ಶಂಕರಾಚಾರ್ಯ ಗುರುಗಳು ಏನೇನು ಹೇಳಿದ್ದಾರೆ ಅದಕ್ಕೆ ನನ್ನ ಸಹಮತವಿದೆ.
ಬಾಬ್ರಿ ಮಸೀದಿಯ ಜಾಗಕ್ಕಾಗಿ ಹೋರಾಟ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಿಹೆಚ್ಪಿ ಸದಸ್ಯರು ಅಯೋಧ್ಯೆಯಲ್ಲಿ ಇಂದಿನ ಕಾರ್ಯಕ್ರಮ ವಿರೋಧಿಸಿದ್ದಾರೆ. ನಾನು ಕೂಡ ಅದನ್ನೆ ಹೇಳುತ್ತಿದ್ದೀನಿ . ಸುಪ್ರೀಂಕೋರ್ಟ್ನಲ್ಲಿ ಕೇಸ್ ಹಾಕಿದ್ದವರಿಗೆ ಆಹ್ವಾನ ನೀಡಿಲ್ಲ. ಇಷ್ಟು ತರಾತುರಿ ಅಗತ್ಯವೇನು ಇದೆ. ಇದಲ್ಲದ್ದನ್ನು ಯೋಚನೆ ಮಾಡಬೇಕಾಗುತ್ತದೆ ಎಂದರು.