ಶ್ರಿರಾಮುಲುಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಗಂಗಾವತಿಯ ಶಾಸಕ, ಕೆಆರ್ ಪಿಪಿ ಅಧ್ಯಕ್ಷ ಜನಾರ್ಧನ್ ರೆಡ್ಡಿ ಹೇಳಿದ್ದಾರೆ.
ಗಂಗಾವತಿಯ ಹುಟ್ಟು ಹಬ್ಬ ಆಚರಣೆ ಸಂದರ್ಭದಲ್ಲಿ ಮಾತನಾಡಿದ ರೆಡ್ಡಿ, ನಾನು ರಾಮುಲು ಅವರ ಜೊತೆ ಮಾತನಾಡಿ ಒಂದು ವರ್ಷಾಯ್ತು. ಶ್ರೀರಾಮುಲು ಜೊತೆ ನನಗೆ ವೈಯಕ್ತಿಕವಾಗಿ, ರಾಜಕೀಯವಾಗಿ ಯಾವುದೇ ಸಂಬಂಧಿವಿಲ್ಲ. ಅವರ ಜೊತೆ ಮಾತನಾಡೋದೆ ಬಿಟ್ಟಿದ್ದೇನೆ ಎಂದಿದ್ದಾರೆ. ರಾಮುಲು – ರೆಡ್ಡಿ ಒಂದು ಕಾಲದಲ್ಲಿ ಕುಚುಕು ಗೆಳಯರಾಗಿದ್ದರು.. ವಾಸ್ತವದಲ್ಲಿ ರಾಮುಲು ಎಂಬ ಬಡಕುಟುಂಬದ ಯುವಕನನ್ನು ಈ ಮಟ್ಟಕ್ಕೆ ಬೆಳೆಸಿದ್ದೇ ರೆಡ್ಡಿ ಕುಟುಂಬ ಆದ್ರೆ, ಬದಲಾದ ಕಾಲಘಟ್ಟದಲ್ಲಿ ರೆಡ್ಡಿಗೆ ಸಂಕಷ್ಟ ಒದಗಿದಾಗ ರಾಮುಲು ಅಂತರ ಕಾಯ್ದುಕೊಂಡರು. ಬಿಜೆಪಿಯಲ್ಲೇ ಉಳಿದು ರೆಡ್ಡಿ ಮನಸ್ಸಿಗೆ ನೋವುಂಟು ಮಾಡಿದರು. ಇದರಿಂದ ನೊಂದಿರುವ ರೆಡ್ಡಿ ಅವರಿಗೆ ತಾವೇ ಬೆಳೆಸಿದ ರಾಮುಲು ತಮ್ಮನ್ನು ಕಷ್ಟಕಾಲದಲ್ಲಿ ಕೈಬಿಟ್ಟಿದ್ದಕ್ಕೆ ರೆಡ್ಡಿ ಸಿಟ್ಟು ಇನ್ನೂ ಆರಿಲ್ಲ.