ಜನಾರ್ಧನ್ ರೆಡ್ಡಿ ಬಿಜೆಪಿಗೆ ಬರ್ತಾರೆ ಎಂಬ ಸುದ್ದಿಗೆ ಖುದ್ದು ಜನಾರ್ಧನ್ ರೆಡ್ಡಿ ತೆರೆ ಎಳೆದಿದ್ದಾರೆ. ಗಂಗಾವತಿಯಲ್ಲಿ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಮಾತನಾಡಿದ ರೆಡ್ಡಿ , ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಮಾತು ಮಾತಿಗೂ ಬಿಜೆಪಿಯನ್ನು ಚುಚ್ಚಿರುವ ರೆಡ್ಡಿ, ದುರಹಂಕಾರಿ ಬಿಜೆಪಿಗೆ ಮತ್ತೆ ಹೋಗಲ್ಲ ಎಂದಿದ್ದಾರೆ. ನಾನು ಈಗಾಗಲೇ ಬಿಜೆಪಿಯಿಂದ ಬಹಳಷ್ಟು ದೂರ ಬಂದಿದ್ದೀನಿ. ಯಾರಿಗಾದರೂ ದುರಹಂಕಾರ ಬಂದ ಮೇಲೆ ಕೆಳಗೆ ಬಿಳಲೇಬೇಕು. ಈಗಾಗಲೇ ರಾಜ್ಯದಲ್ಲಿ ದುರಹಂಕಾರದಲ್ಲಿ ಮೆರೆದವರು ಕೆಳಗೆ ಬಿದ್ದಿದ್ದಾರೆ. ನಾನು ಬೆಳಸಿದ ಸ್ನೇಹಿತರು, ನಾನು ಬೆಳಸಿದ ಬಿಜೆಪಿ ಪಕ್ಷವೂ ನನಗೆ ಅನ್ಯಾಯ ಮಾಡಿದೆ. ನಾನು ಬೆಳಸಿದ ಬಿಜೆಪಿ ಪಕ್ಷದ ನಾಯಕರ ದುರಹಂಕಾರದಿಂದ ಬಿಜೆಪಿ ಸೋತಿದೆ. ಬಿಜೆಪಿಯ ಹಿರಿಯರ ದುರಹಾಂಕಾರದ ನಿರ್ಧಾರಗಳೇ ಬಿಜೆಪಿ ಸೋಲಿಗೆ ಕಾರಣ ಎಂದು ಜನಾರ್ದನರೆಡ್ಡಿ ಕಿಡಿಕಾರಿದ್ದಾರೆ.