ಫ್ರೀಡಂ ಟಿವಿ ನೀಡಿದ್ದ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಎಕ್ಸ್ ಕ್ಲ್ಯೂಸೀವ್ ಸುದ್ದಿ ಸತ್ಯವಾಗಿ ಹೊರಹೊಮ್ಮಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಎಂಬ ಸುದ್ದಿಯನ್ನು ಫ್ರೀಡಂ ಟಿವಿ ಡಿಸೆಂಬರ್ 11ನೇ ತಾರೀಖು, ಬಿತ್ತರಿಸಿತ್ತು. ಇದೀಗ ಶೆಟ್ಟರ್ ಅಧಿಕೃತವಾಗಿ ದೆಹಲಿ ಅಂಗಳದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಈ ಮೂಲಕ ಫ್ರೀಡಂ ಟಿವಿಯ ವಸ್ತು ನಿಷ್ಠ ವರದಿಗಾರಿಕೆ ಸಾಬೀತಾಗಿದೆ. ಬೆಳಗಾವಿ ಅಧಿವೇಶನ ನಡೆಯುತ್ತಿದ್ದ ಹೊತ್ತಲ್ಲಿ ಈ ಬೆಳವಣಿಗೆಯನ್ನು ಗ್ರಹಿಸಿದ್ದ ಫ್ರೀಡಂ ಟಿವಿ ವರದಿಗಾರರು, ಶೆಟ್ಟರ್ ಬಿಜೆಪಿಗೆ ವಾಪಸ್ ಆಗ್ತಾರೆ ಎಂದು ವರದಿ ಬಿತ್ತರಿಸಿದ್ದರು. ಅದಾಗಿ ಕೆಲ ದಿನಗಳ ಬಳಿಕ ನಮ್ಮ ಸುದ್ದಿಯನ್ನು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಖಚಿತ ಪಡಿಸಿದ್ದರು. ಆಗ ಇಂತಹ ಮಹತ್ವದ ಬೆಳವಣಿಗೆಯನ್ನು ಊಹಿಸಲು ಯಾರಿಗಾದರೂ ಕಷ್ಟವಾಗಿತ್ತು ಆದ್ರೆ ಫ್ರೀಡಂ ಟಿವಿ ತಮ್ಮ ಮೂಲಗಳ ವಿಶ್ವಾಸರ್ಹತೆಯನ್ನು ನಂಬಿ ಈ ಸುದ್ದಿಯನ್ನು ಪ್ರಸಾರ ಮಾಡಿತ್ತು. ಶೆಟ್ಟರನ್ನು ಸೆಳೆಯುವ ಮೂಲಕ ಲೋಕಸಭೆ ಎಲೆಕ್ಷನ್ಗೆ ಬಿಜೆಪಿ ನಾಯಕರ ರಣತಂತ್ರ ಹೆಣೆಯುತ್ತಿದ್ದಾರೆಂದು ಖಚಿತ ವರದಿಯನ್ನು ಫ್ರೀಡಂ ಟಿವಿ ಮಾಡಿತ್ತು.. ಪಾಲಿಕೆ ಸದಸ್ಯ ವೀರಣ್ಣರವರ ಮೂಲಕ ಮೊದಲ ಮಾತುಕತೆ ನಡೆದಿತ್ತು. ಈ ಮಾತುಕತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೂಲ ಕಾರಣಕರ್ತರಾಗಿದ್ದರು.