Wednesday, April 30, 2025
24 C
Bengaluru
LIVE
ಮನೆUncategorizedರಾಮನ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಸಿಎಂ ರಾಜಕೀಯ ಬೆರೆಸುವುದು ಸರಿಯಲ್ಲ : ಮಹೇಶ ತೆಂಗಿನಕಾಯಿ

ರಾಮನ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಸಿಎಂ ರಾಜಕೀಯ ಬೆರೆಸುವುದು ಸರಿಯಲ್ಲ : ಮಹೇಶ ತೆಂಗಿನಕಾಯಿ

ಹುಬ್ಬಳ್ಳಿ : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರಾತಿಷ್ಠಾಪನೆ ಆಗಿದೆ. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಸಿಎಂ ಅವರು ರಾಜಕೀಯ ಬೆರೆಸುವುದು ಸರಿಯಲ್ಲ. ಅಯೋಧ್ಯೆಯಲ್ಲಿ ಬಿಜೆಯವರು ಯಾರು ಕೆಲಸ ಮಾಡುತ್ತಿಲ್ಲ. ಇದನ್ನು ಸಿಎಂ ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ ತೆಂಗಿನಕಾಯಿ ಕಿಡಿಕಾರಿದರು.

ಅಯೋಧ್ಯೆಯಲ್ಲಿ ಯಾವುದೇ ಪಕ್ಷದ ಹಸ್ತಕ್ಷೇಪ ಇರುವುದಿಲ್ಲ. ಅಲ್ಲಿ ಅದರದೆ ಆದ ಟ್ರಸ್ಟ್ ಕಮಿಟಿ ಇದೆ, ಅಲ್ಲಿಯ ನಿರ್ಧಾರವನ್ನು ಕಮಿಟಿ ತೆಗೆದುಕೊಳ್ಳತ್ತದೆ. ಈಗ ಶ್ರೀರಾಮನ ಮೂರ್ತಿ ಒಂದೇ ಸ್ಥಾಪನೆ ಆಗಿದೆ. ಮುಂದಿನ ದಿನಮಾನಗಳಲ್ಲಿ ಎನ್ನೇಲ ಮಾಡಬೇಕು ಅದರ ನಿರ್ಧಾರ ಕಮಿಟಿ ತೆಗೆದುಕೊಳ್ಳುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಟ್ಟಿದೆ. ಇನ್ನೂ ಮೂರ್ತಿ ಪ್ರತಿಷ್ಠಾಪನೆ ಕುರಿತು ಟ್ರಸ್ಟ್ ಕಮಿಟಿ ನಿರ್ಧಾರ ಕೈಗೊಳ್ಳುತ್ತದೆ. ಸಿಎಂ ಸಿದ್ದರಾಮಯ್ಯವರು ಇದರಲ್ಲಿ ರಾಜಕೀಯ ಬೆರೆಸುವ ಕೆಲಸ ಮಾಡಬಾರದು ಎಂದು ಅಗ್ರಹಿಸಿದರು.

ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಖೇಧಕರವಾದ ಘಟನೆ

ಶಿವಮೊಗ್ಗದ ಶ್ರೀರಾಮೋತ್ಸವದಲ್ಲಿ ಮಹಿಳೆ ಅಲಹು ಅಕ್ಬರ್ ಕೂಗಿನ ವಿಚಾರವಾಗಿ ಮಾತನಾಡಿದ ಅವರು, ಎಲ್ಲರೂ ಶ್ರೀರಾಮೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿದ್ದಾರೆ. ಆದ್ರೆ ಇಡೀ ದೇಶ ಸೇರಿ ಜಗತ್ತಿನಲ್ಲಿ ಶಿವಮೊಗ್ಗದಂತಹ ಘಟನೆ ಎಲ್ಲಯೂ ನಡೆದಿಲ್ಲ. ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಖೇಧಕರವಾದ ಘಟನೆಯಾಗಿದೆ ಎಂದರು.

ಆದರೆ ಇಂತಹ ಘಟನೆ ನಡೆದಾಗ್ಲೇಲ ಸರ್ಕಾರ ತನಿಖೆಯ ಮುಂಚೆ ಬಿ ರಿಪೋರ್ಟ್ ರೆಡಿ ಮಾಡಿರುತ್ತದೆ. ಅಲಾಹು ಅಕ್ಬರ್ ಅಂತಾ ಘೋಷಣೆ ಕೂಗಿದ ಮಹಿಳೆಗೆ ಈಗ ಮಾನಸಿಕ ಅಸ್ವಸ್ಥ ಮಹಿಳೆ ಎಂದಿದ್ದಾರೆ. ಅಲ್ಪ ಸಂಖ್ಯಾತರ ರಕ್ಷಣಾತ್ಮಕ ರೀತಿಯಲ್ಲಿ ನಡೆದುಕೊಳ್ಳುವುದು ಕಾಂಗ್ರೆಸ್ ಪ್ರವೃತ್ತಿಯಾಗಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಜೊತೆಗೆ ಹುಬ್ಬಳ್ಳಿ ಗಲಭೆಯಲ್ಲಿ ಇದ್ದವರ ರಕ್ಷಣೆಗೆ ಈಗಾಗಲೇ ಮುಂದಾಗಿದ್ದಾರೆ. ಈಗ ಶಿವಮೊಗ್ಗ ಘಟನೆ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿಯ ನ್ಯಾಯ ಯಾತ್ರೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ

ಅಸ್ಸಾಂನಲ್ಲಿ ರಾಹುಲ್ ಗಾಂಧಿ ನ್ಯಾಯ ಯಾತ್ರೆಯಲ್ಲಿ ಮೋದಿ ಮೋದಿ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಆಸ್ಸಾಂನಲ್ಲಿಯ ರಾಹುಲ್ ಗಾಂಧಿಯ ಯಾತ್ರೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಆದ್ರೆ ರಕ್ಷಣೆ ದೃಷ್ಠಿಯಿಂದ ಅಲ್ಲಿಯ ಸರ್ಕಾರ ತನ್ನ ಕರ್ತವ್ಯ ಮಾಡುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಬೇರಿಸುವ ಕೆಲಸವಾಗಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿಯವರು ಈ ಹಿಂದೆ ಕರ್ನಾಟಕ, ಗೋವಾದಲ್ಲಿ ಯಾತ್ರೆ ಮಾಡಿದ್ದಾರೆ. ಆಗ ನಾವು ಅಲ್ಲಿ ಯಾರಿಗೂ ತೊಂದರೆ ನೀಡಲಿಲ್ಲ. ಅವರ ಯಾತ್ರೆ ವಿಫಲವಾಗುತ್ತಿರುವಾಗ ಸಫಲತೆ ಮಾಡಿಕೊಳ್ಳಲು ಹೀಗೆ ಮಾಡುತ್ತಾರೆ. ಸಣ್ಣ ಸಣ್ಣ ಘಟನೆಗಳನ್ನು ದೊಡ್ಡದಾಗಿ ಬಿಂಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಈಗ ಅಸ್ಸಾಂನಲ್ಲಿ ನಡೆದಿರುವ ಸಣ್ಣ ಘಟನೆಯನ್ನು ದೊಡ್ಡದಾಗಿ ಮಾಡುತ್ತಿದೆ‌ ಎಂದು ಟಾಂಗ್ ನೀಡಿದ್ರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments