ಹುಬ್ಬಳ್ಳಿ ; ಮಾಧ್ಯಮಗಳಲ್ಲಿ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ನೈತಿಕ ಪೊಲೀಸ್ಗಿರಿ ಗಮನಿಸಿದ್ದೇನೆ. ಈಗಾಗಲೇ ಪೊಲೀಸರು ಅದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಆದರೆ ಇದು ಪದೇ ಪದೇ ಮಾರಲ್ ಪೋಲೀಸ್ಗಿರಿ ಆಗುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾನಗಲ್‌ನಲ್ಲಿ ನಡೆದ ಘಟನೆಯ ಕುರಿತು ಹಾವೇರಿ ಜಿಲ್ಲೆಯ ಎಸ್ಪಿಯವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಯಾರು ಕೂಡಾ ಈ ರೀತಿ ನೈತಿಕ ಪೊಲೀಸಗಿರಿ ಮಾಡಬಾರದು. ಜೊತೆಗೆ ಮಹಿಳೆಯರು ಯಾರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಸಮಜಾದ ಕೆಲವು ಕಿಡಗೇಡಿಗಳು ಈ ರೀತಿ ಮಾಡುತ್ತಾರೆ. ಅವರಿಗೆ ತಕ್ಕ ಶಿಕ್ಷೆ ನೀಡಿ ನೆಟ್ಟಗೆ ಮಾಡಲಾಗುತ್ತದೆ ಎಂದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾವು ಬಿಜೆಪಿಗಿಂತ ಅತೀ ಹೆಚ್ಚು ಸ್ಥಾನವನ್ನು ಗೆಲ್ಲುತ್ತೇವೆ. ಈಗಾಗಲೇ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತೆ ಕುರಿತು ದೆಹಲಿಯ ನಮ್ಮ ಪಕ್ಷದ ನಾಯಕರು ಸಭೆ ನಡೆಸಿದ್ದಾರೆ. ನನಗೆ ನೀಡಿದ ಜವಾಬ್ದಾರಿ ವರದಿಯನ್ನು ನಾನು ನಿಡಿದ್ದೇನೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆಯನ್ನು ಹೈಕಮಾಂಡನವರು ಮಾಡುತ್ತಾರೆ. ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ರಾಜ್ಯದ ಜನತೆ 136 ಸ್ಥಾನವನ್ನು ನೀಡಿ ಆರ್ಶೀವಾದ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಯುವನಿಧಿ ಜಾರಿ ಹಿಡುದುಕೊಂಡು ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಹಾಗಾಗಿ ಈ ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ನಮಗೆ ಆರ್ಶೀವಾದ ಮಾಡುವ ವಿಶ್ವಾಸವಿದೆ. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾತಿವಾರು, ಪ್ರಾಂತ್ಯವಾರು ಹಾಗೂ ಪಾಪ್ಯೂಲ್ಯಾರಿಟಿ ನೋಡಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಸೊಸಿಯಲ್ ಮೀಡಿಯಾದಲ್ಲಿ ಬಿಜೆಪಿ ಸ್ಲೀಪಿಂಗ್ ಅಭಿಯಾನಕ್ಕೆ ಪ್ರತಿಕ್ರೆಯಿಸಿ ಈಗ ಬಿಜೆಪಿಯವರಿಗೆ ಎಚ್ಚರವಾಗಿದೆ ಎಂದು ಟಾಂಗ್ ನೀಡಿ, ಅಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠಾನಕ್ಕೆ ಪಕ್ಷದ ನಿಲುವಿಗೆ ನಾನು ಬದ್ಧವಾಗಿದ್ದೇನೆ. ನಾನು ಕೂಡಾ ಶ್ರೀರಾಮನ ಭಕ್ತೆ ಎಂದು ತಿಳಿಸಿದರು.


