ಬೆಳಗಾವಿ : ಅಯೋಧ್ಯೆ ರಾಮಮಂದಿರ , ಇದು ಪ್ರಾರಂಭ ಅಷ್ಟೇ ಇನ್ನೂ ಅನೇಕ ಕೆಲಸಗಳೂ ಆಗಬೇಕಿದೆ, ಜಗತ್ತಿನ ಅನೇಕ ಕಡೆಗಳಲ್ಲಿ ಜನ ಸಂಭ್ರಮಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಕೊಂಕು ಮಾತಾಡೋರು ಇದ್ದಾರೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ನನ್ನಮ್ಮ ನನಗೆ ಎದೆ ಹಾಲು ಕುಡಿಸಿದ್ದಾಳೆ, ಬಾಟಲಿ ಹಾಲು ಕುಡಿಸಿಲ್ಲ. ನನ್ನ ರಕ್ತದ ಬಗ್ಗೆ ನನಗೆ ಗೌರವವಿದೆ. ಇದರ ಬಗ್ಗೆ ಯಾರಾದರೂ ಮಾತಾನಾಡಿದರೆ ಹುಷಾರ್ ಎಂದು ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ಎಚ್ಚಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ.
ನಮ್ಮ ರಾಮ, ಹಿಂದೂಗಳು, ಹಿರಿಯರ ಬಗ್ಗೆ ಮಾತನಾಡಿದರೆ ಸಹಿಸಲ್ಲ. ಅವರು ಮೈಸೂರು ಗರಡಿಯಲ್ಲಿ ಬೆಳೆದಿದ್ದರೆ. ನಾನು ಕೂಡ ಮೈಸೂರು ಗರಡಿಯಲ್ಲಿಯೇ ಬೆಳೆದವನು ಎಂದು ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನಮ್ಮವರಿಗೆ ಏಕವಚನದಲ್ಲಿ ಮಾತಾಡಿದರೆ ಏನು ಮಾಡಲಿ..? ಯುದ್ಧಭೂಮಿಯಲ್ಲಿ ಶಾಸ್ತ್ರೀಯ ಸಂಗೀತ, ಭರತ ನಾಟ್ಯ ಮಾಡೋಕೆ ಅವಕಾಶವಿಲ್ಲ. ಯುದ್ಧಭೂಮಿಯಲ್ಲಿ ಹೇಗೆ ಮಾತಡಬೇಕೋ ಹಾಗೇ ಮಾತಡಬೇಕು ಅಲ್ಲಿ ಹೋಗಿ ಭರತ ನಾಟ್ಯ ಮಾಡೋಕೆ ಆಗುತ್ತಾ ಎಂದರು.