ಬೆಂಗಳೂರು : ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ನಡೆದ ನೈತಿಕ ಪೊಲೀಸ್ಗಿರಿ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸರಿಯಾದ ಸೆಕ್ಷನ್ ಹಾಕಿ. ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಕೆಯಾಗಬೇಕು. ಸಾಮೂಹಿಕ ಅತ್ಯಾಚಾರ ನಡೆದಿರುವ ಎಲ್ಲಾ ಪ್ರಕರಣಗಳೂ ಎಸ್ಐಟಿ ತನಿಖೆಗೆ ನೀಡಬೇಕು . ಸರ್ಕಾರ ಯಾವ ರೀತಿ ಯೋಚಿಸುತ್ತದೆಯೋ , ಅದೇ ರೀತಿ ಪೊಲೀಸರು ಕೆಲಸ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹೇಳಿದರು.
ಬೆಂಗಲೂರಿನ ಬಿಜೆಪಿ ಕಚೇರಿಯಲ್ಲಿ ಬಸವರಾಜು ಬೊಮ್ಮಾಯಿ, ಅಶ್ವಥ್ಥ ನಾರಾಯಣ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ನಾಳೆ ಘಟನಾ ಸ್ಥಳಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಭೇಟಿ ಕೊಡುತ್ತೇವೆ. ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿ, ಈ ಪ್ರಕರಣದ ವಿರುದ್ಧ ನಾವೂ ಹೋರಾಟ ಮಾಡುತ್ತೇವೆ. ಎಸ್ಐಟಿ ರಚಿಸಿದರೂ ನ್ಯಾಯಾಂಗ ಮೇಲುಸ್ತುವಾರಿಯ ತನಿಖೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ನೈತಿಕ ಪೋಲಿಸ್ಗಿರಿ ಹೆಚ್ಚಾಗಿದೆ. ಯುವಕರು ರೂಮ್ನಲ್ಲಿ ಯುವತಿಯನ್ನು ಥಳಿಸಿ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಸಾಮೂಹಿಕ ಅತ್ಯಾಚಾರ ಮುಚ್ಚಿಡುವ ಪ್ರಯತ್ನ ಪೊಲೀಸರು ಮಾಡಿದ್ದಾರೆ. ಸಾಮೂಹಿಕ ಅತ್ಯಾಚಾರ ಆಗಿದೆ ಅಂದಿದ್ದರೂ, ಎಪ್ಐಆರ್ ನಲ್ಲಿ ಇದನ್ನೂ ದಾಖಲಿಸಲಿಲ್ಲ. ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ನಾಯಕರ ಒತ್ತಡ ಇದೆ. ನಾನು ಎಸ್ಪಿಗೆ ಮಾತನಾಡಿದಾಗ ಆ ರೀತಿ ಆಗಿಲ್ಲ ಎಂದರು. ಆರು ಜನರಲ್ಲಿ ಮೂರು ಜನ ಅರೆಸ್ಟ್ ಆಗಿಲ್ಲ. ಗೃಹಸಚಿವರು ಕಾಮನ್ ಸ್ಟೇಟ್ ಮೆಂಟ್ ಕೊಡ್ತಾರೆ. ಸಮುದಾಯಗಳನ್ನು ನೋಡಿ ಕೇಸ್ ಹಾಕಿ ಅಂತ ನೀವು ಸ್ಟಾಂಡರ್ಡ್ ಇನ್ಸ್ಟ್ರಕ್ಷನ್ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.