Wednesday, April 30, 2025
35.6 C
Bengaluru
LIVE
ಮನೆUncategorizedರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಇದೆ : ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಇದೆ : ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ಸರ್ಕಾರದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಸೃಷ್ಟಿಸಿ, ಕರ್ನಾಟಕದಲ್ಲಿ ಭಯ ಹುಟ್ಟಿಸೋ ಪ್ರಯತ್ನ ಇದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಭಯ ಹುಟ್ಟಿಸುವ ಘಟನೆ ಪದೇ ಪದೇ ನಡೆಯುತ್ತಲೇ ಇದೆ. ಅದರಲ್ಲಿ ಶ್ರೀಕಾಂತ್​​ ಪೂಜಾರಿ ಕೇಸ್​ ಒಂದು. ಯಾವುದೇ ಕೇಸ್​ ಇಲ್ಲ ಅಂದ್ರು ಅವರನ್ನು ಬಂಧಿಸಿದ್ದಾರೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿಯೂ ಅವರ ಮೇಲೆ ಪ್ರರಕರಣಗಳಿಲ್ಲ, ಪ್ರಕರಣಗಳಿಲ್ಲದೆ  ಬಂಧಿಸಿ ಜೈಲಿಗೆ ಕಳುಹಿಸುವುದು ಏಮರ್ಜೆನ್ಸಿ ಮಾತ್ರ ಆಗುತ್ತಿತ್ತು. ಅದೇ ಮಾದರಿ ಈಗ ನಡೆಯುತ್ತಿದೆ ಎಂದರು.

ರಾಜ್ಯ ಕಾಂಗ್ರೆಸ್ಸಿಗರ ಅಧಿಕಾರದ ಮದ ಹಾಗೂ ಅಹಂಕಾರ ವರ್ತನೆ ಜನ ಬಹಳ ದಿನ ಸಹಿಸುವುದಿಲ್ಲ. ಎಮರ್ಜೆನ್ಸಿ ವಿರುದ್ಧ ಜನ ಸಿಡೆದೆದ್ದು ಬದಲಾವಣೆ ತಂದಿದ್ದು. ಜನವಿರೋಧಿ, ಅಭಿವೃದ್ಧಿ ಶೂನ್ಯ, ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಈ ಕುರಿತು ನಾವು ಸುದೀರ್ಘ ಹೋರಾಟ ಮಾಡುತ್ತೇವೆ. ಜ. 8ರಂದು ಚಿಂತನ ಮಂಥನ ಸಭೆ ನಡೆಯಲಿದ್ದು, ಅಲ್ಲಿ ಈ ಎಲ್ಲ ವಿಷಯಗಳ ಕುರಿತು ಚರ್ಚಿಸುತ್ತೇವೆ ಎಂದು ಹೇಳಿದರು.

ಗೋಧ್ರಾ ಮಾದರಿ ದುರಂತ ನಡೆಯಬಹುದು ಎನ್ನುವ ಬಿ.ಕೆ ಹರಿಪ್ರಸಾದ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಅವರಲ್ಲಿ ಮಾಹಿತಿ ಇದ್ದರೆ ಪೊಲೀಸರಿಗೆ ಕೊಡಬೇಕಿತ್ತು. ಮಾಧ್ಯಮಗಳಿಗೆ ಹೇಳಿಕೆ ನೀಡಿ ಭಯದ ವಾತಾವರಣ ಸೃಷ್ಟಿಸಿರುವುದು ಸರಿಯಲ್ಲ. ಅವರ ಹೇಳಿಕೆ ನಂತರ ಗೃಹ ಸಚಿವರು ಹರಿಪ್ರಸಾದ್​ ಅವರಲ್ಲಿ ಮಾಹಿತಿ ಇರಬಹುದು , ಸಂದರ್ಭ ಬಂದರೆ ಕೇಳುತ್ತೇನೆ ಎಂದು ಹೇಳಿಕೆ ನೀಡಿದ್ದು, ಅಚ್ಚರಿಯಾಗಿದೆ. ಕಾಂಗ್ರೆಸ್​​ ತನ್ನ ತಪ್ಪು ಮುಚ್ಚಿಕೊಳ್ಳಲು ಬಿಜೆಪಿಯನ್ನು ಕೋಮುವಾದಿ ಪಕ್ಷ ಎನ್ನುತ್ತದೆ ನಿಜವಾದ ಕೋಮುವಾದಿ ಪಕ್ಷ ಕಾಂಗ್ರೆಸ್​ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ಎಲ್ಲರಿಗೂ ತಿಳಿದಿದೆ. ಅದು ರಾಜ್ಯದ ಮೇಲೆ ನಡೆದ ಯುದ್ಧದಂತೆ ಇತ್ತು. ಅದಕ್ಕಾಗಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಅದರ ವರದಿಯನ್ನು ಕಾಂಗ್ರೆಸ್​ ಸಹ ಒಪ್ಪಿಕೊಂಡಿದೆ. ಅದನ್ನು ಹೇಳದೆ ಈಗ ಅಮಾಯಕರು ಎಂದು ಹೇಳಿಕೆ ನೀಡುತ್ತದೆ. ಇದು ಇಬ್ಬಗೆಯ ನೀತಿಯಾಗಿದೆ ಎಂದು ಹೇಳಿದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments