ನಾಳೆ ರಾಜ್ಯಸಭೆ ಚುನಾವಣೆ ಹಿನ್ನಲೆಯಲ್ಲಿ ಅಡ್ಡ ಮತದಾನವನ್ನು ತಪ್ಪಿಸಲು ಕಾಂಗ್ರೆಸ್ ಇನ್ನಿಲ್ಲದ ತಂತ್ರಗಾರಿಕೆ ರೂಪಿಸುತ್ತಿದೆ.
ಬೆಂಗಳೂರಿನ ಹಿಲ್ಟನ್ ರೆಸಾರ್ಟ್ ನಲ್ಲಿ ಸಿಎಂ,ಸುರ್ಜೇವಾಲಾ ನೇತೃತ್ವದಲ್ಲಿ ಕಾಂಗ್ರೆಸ್ ಮಹತ್ವದ ಸಭೆ ನಡಿಸದೆ.ಅಡ್ಡಮತದಾನದ ಆತಂಕ ಎದುರಾದ ಹಿನ್ನೆಲೆಯಲ್ಲಿ 60 ಕ್ಕೂ ಹೆಚ್ಚು ಹೊಸ ಶಾಸಕರಿಗೆ ಅಡ್ಡ ಮತದಾನ ಮಾಡದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಅಲ್ಲದೇ ನೂತನ ಶಾಸಕರಿಗೆ ಯಾವುದೇ ಗೊಂದಲವಿಲ್ಲದೆ ಮತಹಾಕುವಂತೆ ಸೂಚನೆ ನೀಡಲಾಗಿದೆ .
ಇದೇ ವೇಳೆ ಸಭೆಯಲ್ಲಿ ಭಾಗಿಯಾದ ಸರ್ಕಾರದ ಸಚಿವರು ಪರಮೇಶ್ವರ್,ಕೆ.ಜೆ.ಜಾರ್ಜ್,ಜಮೀರ್ ಅಹ್ಮದ್ , ಪ್ರಿಯಾಂಕ ಖರ್ಗೆ,ಎಂ.ಬಿ.ಪಾಟೀಲ್,ಹೆಚ್.ಕೆ.ಪಾಟೀಲ್ ಎನ್.ಎಸ್.ಬೋಸರಾಜು,ಕೃಷ್ಣಬೈರೇಗೌಡ,ದಿನೇಶ್ ಗುಂಡೂರಾವ್ ಚೆಲುವರಾಯಸ್ವಾಮಿ,ಕೆ.ಹೆಚ್.ಮುನಿಯಪ್ಪ,ನಾಗೇಂದ್ರ ಹಾಗು ಎಐಸಿಸಿ ಕಾರ್ಯಾದರ್ಶಿಗಳು ಉಪಸ್ಥಿತರಿದ್ದರು.ಇನ್ನೂ ಇಂದು ನಡೆಗ ಮಹತ್ವದ ಸಭೆಯಲ್ಲಿ ಬುಹತೇಕ ಎಲ್ಲಾ ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ದರು.