Freedom TVರಾಜಕೀಯರಾಜ್ಯಸುದ್ದಿ

ಅನಂತ್ ಕುಮಾರ್ ಹೆಗಡೆ ಬದಲು ಕೇಂದ್ರ ಸಚಿವ ಜೈ ಶಂಕರ್​ ನಿಲ್ತಾರಾ.?

ಮುಂಬರಲಿರುವ ಲೋಕಸಭಾ ಚುನಾವಣೆ ಗೆದ್ದು ಮತ್ತೊಂದು ಸುತ್ತಿಗೆ ಅಧಿಕಾರದ ಗದ್ದುಗೆ ಹಿಡಿಯೋಕೆ ಹವಣಿಸುತ್ತಿರುವ ಬಿಜೆಪಿ ಟಿಕೆಟ್ ವಿಚಾರವಾಗಿಯೂ ಸಾಕಷ್ಟು ಸ್ಟ್ರಾಟರ್ಜಿ ಮಾಡುತ್ತಿದೆ. ಅದೇ ರೀತಿ ಈ ಬಾರಿ ಅಭ್ಯರ್ಥಿಗಳನ್ನ ಅಳೆದು ತೂಗಿ ಕಣಕ್ಕೆ ಇಳಿಸೋಕೆ ಸಜ್ಜಾಗಿದೆ. ಅದ್ರಂತೆ ದೊಡ್ಡ ದೊಡ್ಡ ಬಿಜೆಪಿ ನಾಯಕರನ್ನ ಸೈಡ್ ಲೈನ್ ಮಾಡಲಾಗುತ್ತಿದೆ ಎಂಬ ಚರ್ಚೆ ನಡೆದಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೀಸುತ್ತಿದ್ದ ಅನಂತ್ ಕುಮಾರ್ ಹೆಗಡೆಗೂ ಬಿಜೆಪಿ ಈ ಬಾರಿ ಟಿಕೆಟ್ ಕೊಡಲ್ವಾ.? ಎಂಬ ಪ್ರಶ್ನೆ ಎದ್ದಿದೆ. ಇದೇ ಅನಂತ್ ಕುಮಾರ್ ಹೆಗಡೆ ಕ್ಷೇತ್ರದಿಂದ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಸ್ಪರ್ಧೆ ಮಾಡ್ತಾರಾ ಎಂಬ ಚರ್ಚೆ ಶುರುವಾಗಿದೆ. ಕರ್ನಾಟಕದಿಂದ ಕೇಂದ್ರ ಸಚಿವರನ್ನ ಕಣಕ್ಕೆ ಇಳಿಸಲು ಬಿಜೆಪಿ ಪ್ಲಾನ್ ಮಾಡಿದೆ.

ಹೇಳಿ ಕೇಳಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಬಿಜೆಪಿ ಫೈರ್ ಬ್ರಾಂಡ್ ಅಂತಲೇ ಖ್ಯಾತಿಯಾಗಿರುವ ಅನಂತ್ ಕುಮಾರ್ ಹೆಗಡೆ ಹಾಲಿ ಸಂಸದರಾಗಿರುವ ಕ್ಷೇತ್ರ. ಆದ್ರೆ ಕಳೆದ ಕೆಲವು ವರ್ಷಗಳಿಂದ ಅನಂತ್ ಕುಮಾರ್ ಹೆಗಡೆ ಸೈಲೆಂಟ್ ಆಗಿದ್ದಾರೆ.. ಹೀಗಾಗಿ ಅತ್ತ ಕಟೀಲ್ ಇತ್ತ ಹೆಗಡೆ ಇಬ್ಬರ ಬದಲಿಗೆ ನಿರ್ಮಲಾ ಮತ್ತು ಜೈಶಂಕರ್ ರನ್ನ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜತಾಂತ್ರಿಕ ವಿಚಾರದಲ್ಲಿ ಭಾರೀ ಫೇಮಸ್ ಆಗಿರುವ ಸಚಿವ ಜೈ ಶಂಕರ್ ಆಗಾಗ ಕರ್ನಾಟಕಕ್ಕೆ ಬಂದು ಬಿಜೆಪಿ ನಾಯಕರ ಜೊತೆಗೂ ಸಭೆಗಳನ್ನ ಮಾಡ್ತಿದ್ರು. ಇನ್ನು ಹೆಗಡೆ ಬಗ್ಗೆ ಸ್ವಪಕ್ಷದಲ್ಲೇ ಬೇಸರವಿದೆ. ಹೀಗಾಗಿ ಉತ್ತರ ಕನ್ನಡದಿಂದ ಜೈ ಶಂಕರ್ ನಿಲ್ಲಿಸಲು ಹೈಕಮಾಂಡ್ ಒಲವು ತೋರಿದೆ. ಏನಾಗುತ್ತೆ ಕಾದು ನೋಡಬೇಕು.

 

Comments (0)

Your email address will not be published. Required fields are marked *

Back to top button