ರಾಜಕೀಯರಾಜ್ಯಸುದ್ದಿ

ರಾಜ್ಯಸಭೆಗೆ ಇನ್ ಫೋಸಿಸ್ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ …!

ಬೆಂಗಳೂರು: ಭಾರತದ ರಾಷ್ಟ್ರಪತಿಗಳಿಂದ ಕರ್ನಾಟಕದ‌ ಇನ್ ಫೋಸಿಸ್‌ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿಯವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಸುಧಾ ಮೂರ್ತಿಯವರ ಪ್ರಭಾವಶಾಲಿ ಸಾಮಾಜಿಕ ಕಾರ್ಯಗಳು, ಸಮಾಜ ಪ್ರೀತಿ, ಶಿಕ್ಷಣ ಕ್ಷೇತ್ರಕ್ಕೆ ನೀಡಿದ‌ ಕೊಡುಗೆ‌ ಪರಿಗಣಿಸಿ ನಾಮ‌ ನಿರ್ದೇಶನ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು‌ ಈ ಬಗ್ಗೆ‌ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ…

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ, ಔದ್ಯೋಗಿಕ, ಸಾಮಾಜಿಕ‌ ಕ್ಷೇತ್ರಗಳಲ್ಲಿ ಸುಧಾ ಮೂರ್ತಿಯವರು ಅಸಾಧಾರಣ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ‌ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ತಮಗೆ ಸಂತಸವಾಗಿದೆ . ಅವರು ಅವರ ಆದರ್ಶ ವ್ಯಕ್ತಿಯಾಗಿದ್ದು, ರಾಜ್ಯಸಭೆ ಸದಸ್ಯೆಯಾಗಿ ಅವರ ಹೆಚ್ಚಿಸ ಸೇವೆ ದೇಶಕ್ಕೆ ಸಿಗಲಿ ಎಂದು ಅಯೋಧ್ಯೆಯಲ್ಲಿರುವ ಉಡುಪಿ‌ಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Comments (0)

Your email address will not be published. Required fields are marked *

Back to top button