ವಿಜಯ ಲಕ್ಷ್ಮೀ ದರ್ಶನ್ ಮತ್ತು ಪವಿತ್ರಾ ಗೌಡ ಇನ್ಸ್ಟಾ ಪೋಸ್ಟ್ ವಾರ್ ಮತ್ತೆ ಮುಂದುವರೆದಿದೆ. ನಟಿ ಮತ್ತೆ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ನನ್ನನ್ನು ಪ್ರೀತಿಸುವವರ ಜೊತೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಅವರ ಪೋಸ್ಟ್ ವೈರಲ್ ಆಗಿದೆ.
ಪವಿತ್ರಾ ಗೌಡ ಇನ್ಸ್ಟಾದಲ್ಲಿ ನಾನು ಮತ್ತು ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಈ ವಿಚಾರ ವಿಜಯಲಕ್ಷ್ಮಿರವರಿಗೆ ತಿಳಿದಿದೆ. ನನಗೆ ಹಲವಾರು ಸಾರಿ ಕರೆ ಮಾಡಿ ನನ್ನ ಬಳಿ ಅವರು ಮಾತನಾಡಿದ್ದು ಯಾವುದೇ ರೀತಿಯ ಸಮಸ್ಯೆಗಳಿಲ್ಲವೆಂದು ತಿಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ನಾನು ಪವಿತ್ರ ಗೌಡ,ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ life ನಲ್ಲಿ ಉಂಟಾದ problems ಇಂದ ನಾನು ಸಂಜಯ್ ಅವರಿಂದ Divorce ಪಡೆದಿದೇನೆ. ಇಲ್ಲಿಯ ವರಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ!! ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. ಎಂದು ಇನ್ಸ್ಟಾಗ್ರಾಮ್ನಲ್ಲಿ ಫೋಸ್ಟ್ ಮಾಡಿದ್ದಾರೆ..
https://www.instagram.com/p/C2jia2_Pg3j/?utm_source=ig_web_copy_link