ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ರಾಷ್ಟೀಯ ಹೆದ್ದಾರಿ ದಾಟುತ್ತಿದ್ದ ವಿಶೇಷೇತನ ದಂಪತಿಗೆ ಚೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಶ್ರೀಧರ್ (52) ಅರ್ಚನಾ (35) ಎಂದು ಗುರುತಿಸಲಾಗಿದೆ. ಶಾಶ್ವತ ಅಂಧತ್ವದಿಂದ ಬಳಲುತ್ತಿದ್ದ ಇಬ್ಬರೂ ದಂಪತಿಗಳು ರಸ್ತೆ ದಾಟುವ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಬೈಕ್ ಸವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.