1977 ರಲ್ಲಿ ತೆರೆಗೊಂಡ ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ ಅಮರ್, ಅಕ್ಬರ್, ಆಂಥೋನಿ ಎಲ್ಲಾರಿಗೂ ಗೊತ್ತೇ ಇದೆ. ಅದರಲ್ಲಿ ಬೇರ್ಪಟ್ಟ ಮೂರು ಸಹೋದರರು ವಿಭಿನ್ನ ಕುಟುಂಬಗಳು ದತ್ತು ತೆಗೆದುಕೊಂಡು ಸಾಕುವ ಕಥೆ ಜಗಜ್ಜನಿತ. ಈಗ ಇದೆ ರೀತಿಯಾದ ಕಥೆಯೊಂದು ಭುವನೇಶ್ವರದ ನಂದನ್ ಕಾನನ್ ಝೂಲಾಜಿಕಲ್ ಪಾರ್ಕ್ ನಲ್ಲಿ ನಡೆದಿದೆ. ಏಷ್ಯಾಟಿಕ್ ಸಿಂಹವೊಂದು ಮೂರು ಮರಿಗಳಿಗೆ ಜನ್ಮ ನೀಡಿದ್ದೂ, ಅವುಗಳಿಗೂ ಅದೇ ಹೆಸರನ್ನೇ ಇಡಲಾಗಿದೆ.
ಅರಣ್ಯ ವನ್ಯಜೀವಿಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸುಸಂತ ಹೇಳುವಂತೆ, 7 ವರ್ಷಗಳ ನಂತರ ಸಿಂಹಿಣಿ ರೇವಾ 3 ಗಂಡು ಸಿಂಹ ಮರಿಗಳಿಗೆ ಜನ್ಮ ನೀಡಿದ್ದಾಳೆ. ಇದು ರೇವಾಳ 2ನೇ ಪ್ರಸವವಾಗಿದ್ದೂ, ಹುಟ್ಟಿದ ಮರಿಗಳನ್ನು ಅನಾಥವಾಗಿ ಬಿಟ್ಟು ಅಸಡ್ಡೆ ತೋರಿದ್ಲು. ಅವಳು ಮರಿಗಳ ಆರೈಕೆಯಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಲ್ಲಿಲ್ಲ. ನಾವೇ ಅದರ ಆರೈಕೆಗೆ ಮುಂದಾಗಬೇಕಾಯಿತು ಎಂದರು. ವನ್ಯಜೀವಿ ತಜ್ಱರು ಹೇಳುವಂತೆ ಪ್ರಾಣಿಗಳಲ್ಲಿ ಈ ರೀತಿಯ ನಡವಳಿಕೆ ಅತೀ ಸಾಮಾನ್ಯವಾದದ್ದು.
ಸಿಂಹದ ಮರಿಗಳು ಭಾನುವಾರ ಜನಿಸಿದ್ದೂ, ಮಂಗಳವಾರದಂದು ಮರಿಗಳಿಗೆ ಅಮರ್ ಅಕ್ಬರ್ ಆಂಥೋನಿ ಎಂದು ಹೆಸರಿಡಲಾಗಿದೆ . ಅಮರ್ ಹುಟ್ಟುವಾಗ 1.360 ಕೆಜಿ, ಅಕ್ಬರ್ 1.380 ಮತ್ತು ಆಂಥೋನಿ ಹುಟ್ಟುವಾಗ ಸುಮಾರು 1.520 ಕೆಜಿ ತೂಕ ಇತ್ತು ಎಂದು ಹೇಳಲಾಗುತ್ತಿದೆ.
ಮರಿಗಳನ್ನು ಕೈ ಸಾಗಾಣಿಕಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದೂ, ಮರಿಗಳಿಗೆ ಆಕ್ಸಿಟೋಸಿನ್ ಚುಚ್ಚುಮದ್ದನ್ನು ನೀಡಲಾಗಿದೆ. ಸಿಂಹದ ಮರಿಗಳನ್ನುಹೆಚ್ಚಿನ ಚಿಕಿತ್ಸೆಗಾಗಿ ಸ್ವಲ್ಪ ಹೊತ್ತಿನವರೆಗೂ ಐಸಿಯೂ ನಲ್ಲಿ ಇಡಲಾಗಿತ್ತು. ಹಾಗೂ ಅವುಗಳಿಗೆ ಕನಿಷ್ಠ12 ಬಾರಿ ಫಾರ್ಮುಲಾ ಫೀಡಿಂಗ್ ನೀಡಲಾಗುತ್ತಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಧ್ಯ ಮರಿಗಳ ಜೊತೆಗೆ ಭುವನೇಶ್ವರದ ನಂದನ್ ಕಾನನ್ ಮೃಗಾಲಯದಲ್ಲಿ ಒಟ್ಟು 24 ಸಿಂಹಗಳಿದ್ದು, ಇವುಗಳಲ್ಲಿ, 13 ಏಷ್ಯಾಟಿಕ್ ಸಿಂಹಗಳು, 11 ಹೈಬ್ರಿಡ್ ಸಿಂಹಗಳು ಹಾಗೂ 3 ನವಜಾತ ಸಿಂಹದ ಮರಿಗಳಿವೆ ಎನ್ನಲಾಗಿದೆ.