ಮೈಸೂರು : ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರಿದ್ದು, ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿರುಸಿನ ಪ್ರಚಾರ ನಡೆಸಿದರು.

ಯದವೀರ್ ಆಗಮಿಸುತ್ತಿದ್ದಂತೆ ಮೈಸೂರಿನ ಮಹಾರಾಜರಿಗೆ ಜಯವಾಗಲಿ ಎಂದು ವ್ಯಾಪಾರಸ್ಥರು ಘೋಷಣೆ ಕೂಗಿದರು. ಯದುವೀರ್ ಗೆ ಶಾಲು ಹೊದಿಸಿ, ಪೇಟ ತೊಡಿಸಿ, ಹಾರಗಳನ್ನು ಹಾಕಿ ಗೌರವ ಸಮರ್ಪಣೆ ಮಾಡಿದ್ರು. ಅಲ್ಲದೇ ನಂಜನಗೂಡು ರಸಬಾಳೆ, ಸೇಬಿನ ಹಣ್ಣುಗಳನ್ನು ನೀಡಿ, ಯದುವೀರ್ ಮೇಲೆ ವ್ಯಾಪಾರಸ್ಥರು ಹೂವಿನ ಸುರಿಮಳೆಗೆದ್ರು. ಇನ್ನು ಕೆಲವೆಡೆ ಜನರು ಯದುವೀರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ರು.


