ಮೈಸೂರು : ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಪ್ರತಿಷ್ಟಾಪನೆಯಾಗಲು ಆಯ್ಕೆಯಾಗಿರಿವುದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಮೂರ್ತಿ. ಈ ಮೂರ್ತಿಯನ್ನು ಕೆತ್ತಲು ಆಯ್ಕೆಯಾಗಿದ್ದು, ಮೈಸೂರು ತಾಲೂಕಿನ ಹಾರೋಹಳ್ಳಿ – ಗುಜ್ಜೆಗೌಡನಪುರಲ್ಲಿ ಸಿಕ್ಕ ಕೃಷ್ಣ ಶಿಲೆ. ಈಗ ಈ ಶಿಲೆ ಸಿಕ್ಕ ಜಾಗ ಪವಿತ್ರ ಯಾತ್ರಾಸ್ಥಳವಾಗಿ ಮಾರ್ಪಾಟ್ಟಿದ್ದು, ಅಲ್ಲಿಗ ದೇವಸ್ಥಾನ ಕಟ್ಟುವ ಚಿಂತನೆಯೂ ಹುಟ್ಟಿಕೊಂಡಿದೆ.
ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮ ರಾಮ್ದಾಸ್ ಎಂಬುವವರಿಗೆ ಸೇರಿಸ ಜಾಗದಲ್ಲಿ ಕೃಷ್ಣ ಶಿಲೆ ಇದೆ ಎಂಬ ಮಾಹಿತಿ ಸಿಕ್ಕಿತು. ಅದು ಕೂಡಾ ಭಾರಿ ಮಹತ್ವದ ಮತ್ತು ಯಾವ ಮಳೆ ಗಾಳಿ , ಬಿಸಿಲಿಗೂ , ಆಸಿಡ್ ದಾಳಿಗೂ ಏನೂ ಆಗದ ಶಿಲೆ ಎಂದು ಪರಿಗಣಿತವಾಗಿ ಕೃಷ್ಣ ಶಿಲೆ ಎಂದು ತಿಳಿದುಬಂದಿತ್ತು.
ಮೈಸೂರಿನ ಅರುಣ್ ಯೋಗಿರಾಜ್ ಅವರು ಕರತ್ತಿದ ಮೂರ್ತಿ ಅಯೋಧ್ಯೆಗೆ ಆಯ್ಕೆಯಾಗಿದೆ ಎಂದು ಬಹಿರಂಗವಾಯಿತೋ ಆಗ ಕಲ್ಲಿನ ಮೂಲವೂ ತಿಳಿಯಿತು. ಇದಾದ ಕೂಡಲೇ ಊರಿನ ಜನರು ಕಲ್ಲು ತೆಗೆದ ಜಾಗದಲ್ಲಿ ಚಪ್ಪರ ಹಾಕಿ ಪೂಜೆ ಮಾಡಿ ಸಂಭ್ರಮಾಚರಿಸಿದ್ದಾರೆ. ಇದೀಗ ಶ್ರೀರಾಮನ ಶಿಲೆ ಸಿಕ್ಕ ಜಾಗದಲ್ಲಿ ದೇವಾಲಯ ನಿರ್ಮಾಣಕ್ಕೆ ಜಮೀನು ಮಾಲೀಕ ರಾಮ್ದಾಸ್ ಇಂಗಿತ ವ್ಯಕ್ತಪಡಿಸಿದ್ದಾರೆ.
ಇಷ್ಟು ವರ್ಷ ರಾಮ ಇಲ್ಲೆ ನೆಲೆಸಿದ್ದ. ಈಗ ಮೂರ್ತಿಯಾಗಿ ಆಯೋಧ್ಯೆ ಸೇರಿದ್ದಾನೆ ಎಂನ ನಂಬಿಕೆಯನ್ನು ವ್ಯಕ್ತಪಡಿಸುವ ರಾಮ್ದಾಸ್ ಅವರು ತಮ್ಮ ಜಮೀನು ಪುಣ್ಯಸ್ಥಳವಾಗಿ ಮಾರ್ಪಾಡಾದ ಬಗ್ಗೆ ಖುಷಿಯಾಗಿದ್ದಾರೆ. ಗುಜ್ಜೇಗೌಡಪುರಸ ರಾಮ್ದಾಸ್ ಅವರ ಜಮೀನಿನಲ್ಲಿ ಮಂಗಳವಾರ ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜೆ ನಡೆಸಲಾಯಿತು. ನಾಡಹಬ್ಬ ದಸರೆಯ ಗಜಪಡೆಯ ಅರ್ಚಕ ಪ್ರಹ್ಲಾದ್ ರಾವ್ ಅವರು ಪ್ರಖ್ಯಾತರಾಗಿದ್ದಾರೆ.
ಶಿಲೆ ಸಿಕ್ಕ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಲು ಗ್ರಾಮದ ಮಹಿಳೆಯರಿಂದ ಆರತಿ ಬೆಳಗಿ, ಹಾಲು ಹರಿಸಿ ಶಾಂತಿ ಪೂಜೆ ನೆರವೇರಿಸಿದರು.