Wednesday, August 20, 2025
20.6 C
Bengaluru
Google search engine
LIVE
ಮನೆರಾಜಕೀಯಟಿಕೆಟ್ ಕೈ ತಪ್ಪುವ ಭೀತಿ ; ಗೋಳಾಡಿದ ಪ್ರತಾಪ್ ಸಿಂಹ

ಟಿಕೆಟ್ ಕೈ ತಪ್ಪುವ ಭೀತಿ ; ಗೋಳಾಡಿದ ಪ್ರತಾಪ್ ಸಿಂಹ

ಮೈಸೂರು : ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ಕೈತಪ್ಪುವ ಭೀತಿ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಅವರು ಫೇಸ್ ಬುಕ್​ನಲ್ಲಿ ಲೈವ್ ವಿಚಾರಗಳನ್ನು ತಿಳಿಸಿ ಭಾವುಕರಾಗಿದ್ದಾರೆ.

ಮೈಸೂರಲ್ಲಿ ರಾಜಕಾರಣ ಮಾಡುವುದು ತುಂಬಾ ಕಷ್ಟ. ರಾಜರ ಊರು ಅಂದಮೇಲೆ ಚಾಡಿಕೋರರು, ಹೊಗಳುಭಟ್ಟರು ಎಲ್ಲರೂ ಇರುತ್ತಾರೆ. ಸಿದ್ಧಾಂತ ಬೇರೂರುವುದು ಬಹಳ ಕಷ್ಟ. 1989ರಿಂದ ಮೈಸೂರಿನಲ್ಲಿ ಸತತವಾಗಿ ಎರಡನೇ ಸಲ ಯಾರನ್ನೂ ಗೆಲ್ಲಿಸಿಲ್ಲ. ಜನ ನನ್ನನ್ನು ಗೆಲ್ಲಿಸಿದ್ದಾರೆ. ಜನರಿಗೆ ಅವರ ಮನೆ ಬಾಗಿಲು ಕಾಯುವವರು ಬೇಕು. ಜನರು ಹೋಗಿ ಬಾಗಿಲು ಕಾಯುವವರು ಅವರಿಗೆ ಬೇಡ. ಮೈಸೂರಿನಲ್ಲಿ ಎರಡು ಬಾರಿ ರಾಜವಂಶಸ್ಥರನ್ನು ಸೋಲಿಸಿದ್ದಾರೆ. ಆದರೆ 40 ವರ್ಷಗಳಲ್ಲಿ ನಾನೊಬ್ಬನನ್ನು ಮಾತ್ರ ಸತತ ಎರಡು ಬಾರಿ ಗೆಲ್ಲಿಸಿದ್ದಾರೆ.

ಟಿವಿಗಳಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುತ್ತೋ ಇಲ್ವೋ ಅಂತ ಬರುತ್ತಿದೆ. ನನ್ನ ಟಿಕೆಟ್ ಬಗ್ಗೆ ಚಾಮುಂಡೇಶ್ವರಿ ನಿರ್ಧಾರ ಮಾಡುತ್ತಾಳೆ. ಆ ತಾಯಿಗೆ ಬಿಟ್ಟಿದ್ದೇನೆ. ಟಿಕೆಟ್ ನನಗೆ ಕೊಟ್ಟರೆ ನಾನು 3 ಲಕ್ಷ ಅಂತರದಿಂದ ಗೆಲ್ಲುತ್ತೇನೆ. ಕರ್ಯಕರ್ತರು ನನ್ನ ಪರ ನಿಂತಿದ್ದಾರೆ. ಈಶ್ವರಪ್ಪ ಅಭಿಪ್ರಾಯ ಸಂಗ್ರಹಕ್ಕೆ ಬಂದಾಗ ನನ್ನ ಹೆಸರನ್ನೇ ಕಾರ್ಯಕರ್ತರು ಸೂಚಿಸಿದ್ದರು.

ನಾಳೆ ಬೆಳಗ್ಗೆ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಬೇರೆ ಯಾವ ಕ್ಷೇತ್ರದಲ್ಲೂ ಸಂಸದರಿಗೆ ಟಿಕೆಟ್ ಕೊಡಿ ಎಂದು ಕಾರ್ಯಕರ್ತರು ಹೇಳಿಲ್ಲ. ನನ್ನ ಕ್ಷೇತ್ರದ ಕಾರ್ಯಕರ್ತರು ಹೇಳಿದ್ದಾರೆ. ನನಗೆ ಸಿಕ್ಕಿದ ಪ್ರೀತಿ ವಿಶ್ವಾಸ ಎಷ್ಟು ಜನ ಸಂಸದರಿಗೆ ಸಿಕ್ಕಿದೆ? ಎಷ್ಟೋ ಸಂಸದರಿಗೆ ಅವರ ಕ್ಷೇತ್ರದಲ್ಲೇ ಪ್ರೀತಿ ಸಿಕ್ಕಿಲ್ಲ. ನನಗೆ ಕ್ಷೇತ್ರ ಮೀರಿ ಪ್ರೀತಿ ಸಿಕ್ಕಿದೆ ಎಂದು ಪ್ರತಾಪ್ ಸಿಂಹ ಫೆಸ್ ಬುಕ್ ಲೈವ್ ನಲ್ಲಿ ಭಾವುಕರಾಗಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments