ಲೋಕಸಭೆ ಚುನಾವಣೆಯಲ್ಲಿ ತುಮಕೂರಿನಿಂದ ವಿ. ಸೋಮಣ್ಣ ಸ್ಪರ್ಧೆಯಿಂದ ಕೆಲ ಬಿಜೆಪಿ
ನಾಯಕರು ಬಂಡಾಯ ಎದ್ದಿದ್ದಾರೆ. ಮೊದಲಿನಿಂದಲೂ ಹೊರಗಿನವರಿಗೆ ಟಿಕೆಟ್ ಕೊಡಬೇಡಿ ಎನ್ನುತ್ತಿದ್ದ ಮಾಜಿ ಸಚಿವ ಮಾಧುಸ್ವಾಮಿ ಈಗ ಸೋಮಣ್ಣಗೆ ಕೈ ಕೊಡುವುದು ಗ್ಯಾರಂಟಿ..
ಅದರಲ್ಲೂ ಮಾಜಿ ಸಚಿವ, ಟಿಕೆಟ್ ಆಕಾಂಕ್ಷಿ, ಮಾಧುಸ್ವಾಮಿ, ಕೇಂದ್ರ ಮತ್ತು ರಾಜ್ಯ ನಾಯಕರ ಸಂಧಾನಕ್ಕೆ ಸ್ಪಂದಿಸುತ್ತಿಲ್ಲ ಹಲವಾರು ಬಾರಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಚುನಾವಣಾ ಸಮಿತಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಮೂಲಕ ಸಂಪರ್ಕಸಿದರೂ ಪ್ರಯೋಜನ ಆಗಿಲ್ಲ. ಯಾವುದೇ ಕಾರಣಕ್ಕೂ ನಾನು ಸೋಮಣ್ಣ ಪರ ಪ್ರಚಾರ ಮಾಡಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ವೈ ವಿರುದ್ಧ ಅಸಮಾಧಾನ ಇದೆ ಎಂದು ಹೇಳಿರುವ ಮಾಧುಸ್ವಾಮಿ, ಯಡಿಯೂರಪ್ಪ ಮೇಲೆ ಅಪಾರ ನಂಬಿಕೆ ಇತ್ತು. ಅವರೇ ಮೊದಲು ಲೋಕಸಭೆ ಚುನಾವಣೆಗೆ ರೆಡಿಯಾಗಿ ಎಂದು ಹುರಿದುಂಬಿಸಿದರು.
ನನ್ನನ್ನು ಸೇರಿದಂತೆ ಈಶ್ವರಪ್ಪ, ಬೊಮ್ಮಾಯಿಯವರಿಗೆ ಸಲಹೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ವಿ. ಸೋಮಣ್ಣನವರಿಗೆ ಟಿಕೆಟ್ ನೀಡಿದ್ದಾರೆ ಎಂದು ತೀವ್ರ ಬೇಸರ ಹೊರಹಾಕಿದ್ದಾರೆ. ಕೆಲ ಕಾಂಗ್ರೆಸ್ ಮುಖಂಡರು ಸಂಪರ್ಕಿಸಿದ್ದು ನಿಜ, ಹಾಗೆಯೇ ಬಿಜೆಪಿ ನಾಯಕರು ಮನವೊಲಿಸುತ್ತಿರುವುದೂ ನಿಜ .ಆದರೆ ನಾನು ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ನವರಿಗೆ ನಾನು ಬರ್ತಿನಿ ಅಂತ ಹೇಳಿಲ್ಲ. ಹಾಗಂತ ಬರೋಲ್ಲ ಅಂತನೂ ಹೇಳಿಲ್ಲ ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ಇತ್ತ ಹಲವೆಡೆ ಕೆಲವು ರಾಜಕೀಯ ವಲಯದಲ್ಲಿ ಮಾಧುಸ್ವಾಮಿ ಬಿಜೆಪಿಗೆ ಕೈ ಕೊಟ್ಟು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಜಗದೀಶ್ ಶೆಟ್ಟರ್ರಿಂದ ತೆರವಾಗಿರುವ ಮೇಲ್ಮನೆ ಸ್ಥಾನ ಮಾಧುಸ್ವಾಮಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ ಮಾಧುಸ್ವಾಮಿಗಳು ಮಾತುಗಳು ನೋಡಿದ್ರೆ, ಸೋಮಣ್ಣಗೆ ಕೈ,.. ಕಾಂಗ್ರೆಸ್ ಗೆ ಜೈ ಎನ್ನುವಂತಿದೆ.