ರಾಜಕೀಯಸಿನಿಮಾಸುದ್ದಿ

ಶಿವರಾಜ್​ ಕುಮಾರ್​ ವಿರುದ್ಧ ಬಿಜೆಪಿ ದೂರು

ಬಿಜೆಪಿಯಿಂದ ಶಿವರಾಜ್​ಕುಮಾರ್​ ವಿರುದ್ಧ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗಿದೆ. ಅವರ  ಚಿತ್ರಗಳು ಹಾಗೂ ಜಾಹಿರಾತು ಪ್ರದರ್ಶನವನ್ನ ತಕ್ಷಣವೇ ತಡೆಯಲು ಬಿಜೆಪಿ ನಿಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಶಿವರಾಜ್​ಕುಮಾರ್​ ಪತ್ನಿ ಗೀತಾ ಶಿವರಾಜ್​ಕುಮಾರ್​ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಈ ಹಿನ್ನೆಲೆ ಪತ್ನಿ ಪರ ಶಿವರಾಜ್​ಕುಮಾರ್  ಪ್ರಚಾರ ಮಾಡುತ್ತಿದ್ದಾರೆ. ಅವರ ಚಿತ್ರ ಪ್ರದರ್ಶನದಿಂದ ಮತದಾರರ ಮೇಲೆ ಪ್ರಭಾವ ಇರುವ ಸಾಧ್ಯತೆ ಕಾರಣದಿಂದ ಅವರ ಚಿತ್ರಗಳ ಪ್ರದರ್ಶನಕ್ಕೆ ನಿರ್ಬಂಧ ಹೇರಲು ಕೋರಿದ್ದಾರೆ.

Comments (0)

Your email address will not be published. Required fields are marked *

Back to top button