ಕೊಪ್ಪಳ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ಶೆಟ್ಟರ್ ಬಿಜೆಪಿಗೆ ಹೋಗಿದ್ದು ನಮಗೇನು ತೊಂದ್ರೆ ಇಲ್ಲ.ಅವರ ಗೌರವ ಕಡಿಮೆಯಾಗಿದೆ, ನಮ್ಮಂತ ಸಣ್ಣವರು ಮಾಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಸರ್ಕಾರ ರಾಜ್ಯದ ಬಡವರಿಗೆ ಗ್ಯಾರಂಟಿ ಯೋಜನೆ ಕೊಟ್ಟಿದೆ. ಸರ್ಕಾರ ಆದಷ್ಟು ಬೇಗ ಬರ ಪರಿಹಾರ ನೀಡಲಾಗುತ್ತೆ. ಈಗಾಗಲೇ ಜಿಲ್ಲೆಯಲ್ಲಿ 90 ಸಾವಿರ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ. ಕೇಂದ್ರ ಸರ್ಕಾರ ಬರದ ವಿಚಾರದಲ್ಲಿ ರಾಜಕಿಯ ಮಾಡ್ತಿದೆ. ಒಂದು ಪೈಸೆ ಹಣ ಹೊಡ್ತಾಯಿಲ್ಲ, ಕೇವಲ ಮಂತ್ರಾಕ್ಷತೆ ಹಂಚಿಕೆ ಮಾಡ್ತಿದ್ದಾರೆ. ಪ್ರಧಾನಿಯವರನ್ನ ಸಿಎಂ ಭೇಟಿ ಮಾಡಿದ್ದು ಬರದ ಬಗ್ಗೆ ಚರ್ಚೆಗೆ ಅಲ್ಲ. ದೇಶದ ಪ್ರಧಾನಿ ಒಂದು ದಿನವು ಸಂಸದರನ್ನ ಕರೆದು ಸಮಸ್ಯೆ ಕೇಳಿಲ್ಲ. ಅವರು ರಾಜ್ಯಕ್ಕೆ ಬಂದಾಗ ನಮಗೆ ಮಾತಾಡೋಕೆ ಟೈಮ್ ಇಲ್ಲ. ಕೇವಲ ರೋಡ್ ಶೋ ಮಾಡೋಕೆ ಟೈಮ್ ಇದೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂದಿ ನ್ಯಾಯ ಯಾತ್ರೆಗೆ ಅಡ್ಡಿ ವಿಚಾರವಾಗಿ ಮಾತನಾಡಿದ ಅವರು, ನ್ಯಾಯ ಯಾತ್ರೆಯಿಂದ ಬಿಜೆಪಿಗೆ ನಡುಕ ಉಂಟಾಗಿದೆ, ಬಿಜೆಪಿಯವರಿಗೆ ಟೆನ್ಶನ್ ಆಗಿದೆ. ಹೀಗೆ ಮುಂದುವರೆದ್ರೆ ರಾಮ ಕೂಡಾ ಶಾಪ ಹಾಕ್ತಾನೆ. ರಾಮ ಅವರಿಗೆ ಕನಸಲ್ಲಿ ಬಂದು ಶಾಪ ಕೊಡಬಹುದು ಎಂದರು.
ಅನಂತ ಕುಮಾರ ಹೆಗಡೆ ಮಸೀದಿ ಕೆಡವಿ ಮಂದಿರ ನಿರ್ಮಾಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅನಂತ ಕುಮಾರ್ ಹೆಗಡೆ ಒಬ್ನ ಹುಚ್ಚ ಅಂತ ಕೈ ಬಿಟ್ಟಿದ್ದಾರೆ. ಆತನಿಗೆ ಹುಚ್ಚು ಹಿಡಿದಿದೆ, ಅವರೇ ಕೈ ಬಿಟ್ಟಿದ್ದಾರೆ ನಾವ್ಯಾಕೆ ರಿಯಾಕ್ಟ ಮಾಡೋಣ ಎಂದು ಶಿವರಾಜ್ ತಂಗಡಗಿ ಹೇಳಿದರು.