ಕೊಪ್ಪಳ : ಕನ್ನಡ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಮಾರ್ಚ್ 11,12 ರಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವ ನಡೆಯಲಿದೆ ಎಂದು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ಸವಕ್ಕೆ ಸ್ಥಳೀಯ, ರಾಜ್ಯ ರಾಷ್ಟ್ರ ಮಟ್ಟದ ಕಲಾವಿದರು ಬರುತ್ತಾರೆ. ಆನೆಗೊಂದಿ ವಿಜಯನಗರ ಅರಸರ ಮೊದಲ ರಾಜಧಾನಿಯಾಗಿತ್ತು. ಆನೆಗೊಂದಿ ಉತ್ಸವ ಈ ಭಾಗದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆ ಸಾರುವ ಹೆಮ್ಮೆಯ ಆಚರಣೆಯಾಗಿವೆ.
ನಾನು ವಾಪಾಸ್ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ
ಬಿಜೆಪಿ ಜೊತೆ ಕೆಆರ್ಪಿಪಿ ವಿಲೀನ ವಿಚಾರವಾಗಿ ಮಾತನಾಡಿದ ಅವರು, ನಾನು ವಾಪಾಸ್ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಕೆಆರ್ಪಿಪಿಯನ್ನು ಬಿಜೆಪಿಒಯಲ್ಲಿ ವಿಲೀನ ಕೂಡ ಮಾಡುವುದಿಲ್ಲ. ಆದರೆ ದೇಶದ ಅಭಿವೃದ್ಧಿಗೆ ಬಿಜೆಪಿ ಜತೆ ಹೋದಾಣಿಕೆಗೆ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಕನಸು ಬಿದ್ದರೂ ನಾನು ಕಾಂಗ್ರೆಸ್ಗೆ ಹೋಗುತ್ತೇನೆ ಎನ್ನುವುದು ಸುಳ್ಳು
ನನ್ನ ಜೊತೆ ಚರ್ಚಿಸಿರುವ ಹಿರಿಯರಿಗೆ ನನ್ನ ವಿಚಾರವನ್ನು ಹೇಳಿದ್ದೇನೆ. ನನ್ನ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ 20 ವರ್ಷಗಳ ಸಂಬಂಧವಿದೆ, ಆದರೆ ನಾನು ಬಿಜೆಪಿಗೆ ಆಗಲಿ, ಕಾಂಗ್ರೆಸ್ಗೆ ಆಗಲಿ ಹೋಗುವುದಿಲ್ಲ.