ಕೊಪ್ಪಳ: ಕೊಪ್ಪಳದ ಆಸ್ಪತ್ರೆಯಲ್ಲಿ ಹನಿ ಹನಿ ನೀರಿಗೂ ಪರದಾಡುವಂತಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ರೋಗಿಗಳು ಕುಡಿಯುವ ನೀರಿಗೆ ಸಂಕಷ್ಟ ಅನುಭವಿಸುವಂತಾಗಿದೆ. ಇದರಿಂದಾಗಿ ರೋಗಿಗಳು ಹಣ ತೆತ್ತು ನೀರನ್ನು ಖರೀದಿಸುವಂತಾಗಿದೆ. ಆಸ್ಪತ್ರೆಯಲ್ಲಿ ಉಚಿತ ಚಿಕತ್ಸೆ ಸಿಕ್ಕರೂ ಆಸ್ಪತ್ರೆಗೆ ಚಿಕಿತ್ಸೆ ಬರುವವರಿಗೆ ಕುಡಿಯುವ ನೀರಿಗೆ ಸಹ ಹಣ ತೆರೆವಂತಾಗಿದೆ. ರಾಜ್ಯದಲ್ಲಿ ಬೀಕರ ಬರಗಾಲ ಇದೆ. ಜನರು ಎಲ್ಲೆಡೆ ಕುಡಿಯುವ ನೀರಿಗೂ ಪರದಾಡುತಿದ್ದಾರೆ. ಆದ್ರೆ ಕೊಪ್ಪಳದ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೂ ಸಮರ್ಪಕ ನೀರಿನ ವ್ಯವಸ್ಥೆ , ಮಾಡದ ಕಾರಣ, ಕುಡಿಯುವ ನೀರಿನ ತಾತ್ವಾರ ಶುರುವಾಗಿದೆ. ಹೀಗಾಗಿ, ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಕ್ಕರೂ, ಕುಡಿಯೋಕೆ ನೀರಿಗೆ ಹಣ ಖರ್ಚು ಮಾಡಬೇಕಾಗಿದೆ.
ಹಿಂದುಳಿದ ಭಾಗದಲ್ಲಿ ಬಡಜನರು, ಸಾಮಾನ್ಯರು ಕಡಿಮೆ ಖರ್ಚಿನಲ್ಲಿ ಚಿಕತ್ಸೆ ಪಡೆಯಬಹುದು, ಗುಣಮುಖರಾಗಬಹುದು ಎನ್ನೋ ಆಸೆಯಿಂದ ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ಆದ್ರೆ ಕೊಪ್ಪಳದ ಸರಕಾರಿ ಆಸ್ಪತ್ರೆಗೆ ಬರುವವವರಿಗೆ, ಆಸ್ಪತ್ರೆಯಲ್ಲಿನ ಚಿಕಿತ್ಸೆ ವ್ಯೆಚ್ಚಕ್ಕಿಂತ ಕುಡಿಯುವ ನೀರನ ವೆಚ್ಚವೇ ಹೆಚ್ಚಾಗಿದ್ದು, ಇದರಿಂದ ರೋಗಿಗಳಿಗೆ, ಜನಸಾಮಾನ್ಯರಿಗೆ ತೀವ್ರ ಹೊರೆಯಾಗುತ್ತಿದೆ. ಇದರಿಂದಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ರೋಗಿಗಳು ಆಹಾಕಾರ ಪಡುವಂತಾಗಿದೆ. ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳು ನೀರಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತಿದೆ. ಕಳೆದ ಒಂದು ವಾರದಿಂದ ಸರಿಯಾಗಿ ಕುಡಿಯುವ ನೀರು ಬಾರದ ಕಾರಣ ಸಮಸ್ಯೆ ಸೃಷ್ಠಾಯಾಗಿದ್ದು, ರೋಗಿಗಳು ದುಡ್ಡು ಕೊಟ್ಟು ಹೊರಗಡೆಯಿಂದ ನೀರು ತಂದು ಕುಡಿಯುವ ಪರಿಸ್ಥಿತಿ ಬಂದಿದೆ, ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂಧಿಯನ್ನ ವಿಚಾರಿಸಿದ್ರೆ, ಅವರೆಲ್ಲ ಡೋಂಟ್ ಕೇರ್ ಎಂಬಂತೆ ವರ್ತಿಸಿ, ಕೈತೊಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ, ಕೊಪ್ಪಳ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ತಮ್ಮೊಂದಿಗೆ ಕುಡಿಯುವ ನೀರು ಕೂಡ ತರಬೇಕಾಗಿದೆ. ಹೀಗಾಗಿ, ಆಸ್ಪತ್ರೆಗೆ ಕುಡಿಯುವ ನೀರು ಸರಬರಾಜು ಮಾಡುವವವರ ವಿರುದ್ಧ ಇದೀಗ ರೋಗಿಗಳು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಜಿಲ್ಲಾಡಳಿತ, ಸರಕಾರ ಈ ಬಗ್ಗೆ ಕ್ರಮ ಕೈಗೊಂಡು, ರೋಗಿಗಳಿಗೆ ಹೊರೆಯಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.