ಕೋಲಾರ : ಕೋಲಾರ ಜಿಲ್ಲೆಯ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಸಿರಿದಾನ್ಯ ಹಾಗೂ ಫಲಪುಷ್ಪ ಪ್ರದರ್ಶನ ವನ್ನು ಜಿಲ್ಲಾಡಳಿತ, ಜಿಲ್ಲಾಪಂಚಾಯಿತ್ , ಕೃಷಿ ಇಲಾಖೆ , ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದು ಉಸ್ತುವಾರಿ ಸಚಿವ ಬಿಎಸ್ ಸುರೇಶ್ ರವರು ಚಾಲನೆ ನೀಡಿದ್ದಾರೆ . ಶುಕ್ರವಾರ, ಶನಿವಾರ , ಭಾನುವಾರ ಫಲ ಪುಷ್ಪ ಮೇಳ ಪ್ರದರ್ಶನ ಗೊಳ್ಳಲಿದ್ದು ವಾರಾಂತ್ಯದಲ್ಲಿ ಸಾವಿರಾರು ಪ್ರಕೃತಿ ಪ್ರಿಯರು ಆಹ್ವಾದಿಸಲು ಅವಕಾಶ ನೀಡಲಾಗಿದೆ.
ಕೋಲಾರ ಜಿಲ್ಲಾ ತೋಟಗಾರಿಕಾ ನರ್ಸರಿಯಲ್ಲಿ ಆಯೋಜಿಸಿರುವ ಪಲಪುಷ್ಪ ಪ್ರದರ್ಶನ ದಲ್ಲಿ ಮೊದಲಿಗೆ ಕಾಣುವುದು ಬಣ್ಣದ ಹೂಗಳಿಂದ ಅಲಂಕೃತವಾದ ಬೃಹದಾಕಾರದ ಇತ್ತೀಚೆಗೆ ನಿಧನವಾದ ಅರ್ಜುನ ಆನೆಯ ಪ್ರತಿಕೃತಿ ನೋಡುಗರ ಆಕರ್ಷಣೆ ಬಿಂದುವಾಗಿದೆ ,
ಇನ್ನು ಕಸದಿಂದ ಮಾಡಿರುವ ಕಲಾಕೃತಿಗಳು ನೋಡುಗರಿಗೆ ಸ್ಪೂರ್ತಿದಾಯಕ ವಾಗಿದ್ದು ಕಲ್ಲಂಗಡಿ ಹಣ್ಣಿನಿಂದ ಮೂಡಿರುವ ರಾಮಮಂದಿರ , ನವಿಲುಗಳು , ಆಗಲಕಾಯಿಯ ಮೊಸಳೆ ಹಾಗೂ ವಿವಿಧ ಗಣ್ಯರ ಭಾವ ಚಿತ್ರಗಳು ನೋಡುಗರನ್ನು ಅಚ್ಚರಿಗೊಳಿಸುತ್ತಿವೆ.
ಜೊತೆಗೆ ಹತ್ತಾರು ವಿವಿಧ ಬಗೆಯ ಮೀನುಗಳು ನೋಡುಗರಿಗೆ ಮುದನೀಡುತ್ತಿವೆ . ಹೂವಿನಿಂದ ರಚಿಸಲಾಗಿರುವ ಡೈನೋಸಾರಸ್ ಮೇಳದ ಕೇಂದ್ರ ಬಿಂದುವಾಗಿದೆ.
ಹೂಗಳಿಂದಲೇ ಅಲಂಕೃತ ಗೊಂಡಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಬಾವಚಿತ್ರ ಬಾಳೆ ಎಲೆ ಗುಡಿಸಿಲು ನೋಡುಗರಿಗೆ ಮತ್ತಷ್ಟು ಆಹ್ಲಾದ ನೀಡುತ್ತಿದ್ದು ಹಳಿ ಸೊಗಡಿನ ಹಳ್ಳಿ ಮನೆಗಳ ಪ್ರತಿಕೃತಿ ಗಳು ಹಾಗೂ ಹಳ್ಳಿ ಜೀವನದ ಕೃಷಿ ಪರಿಕರಗಳು ಗ್ರಾಮೀಣ ರೈತರ ಸೊಗಡನ್ನು ಪರಿಚಯಿಸುವಂತಿದೆ , ಇನ್ನು ವಿವಿಧ ಬಗೆಯ ಔಷಧಿ ಗಿಡ ಮರಗಳು ಸೇರಿದಂತ ಕಾಡಿನ ಮರಗಳ ಪರಿಚಯ ಮಕ್ಕಳಿಗೆ ಉಪಯೋಗವಾಗಲಿದೆ, ಇನ್ನು ಸಿರಿದಾನ್ಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳು ಸಹ ಮೇಳದಲ್ಲಿ ಇದ್ದು ಮುದ್ದಾದ ಜೋಡೆತ್ತುಗಳನ್ನು ಸಹ ಮೇಳದಲ್ಲಿ ನೋಡಬಹುದಾಗಿದೆ , ಒಟ್ಟಾರೆಯಾಗಿ ರೈತರ ಜೀವನದ ಹಳ್ಳಿ ಜೀವನದ ಕಲಾಚಿತ್ರಗಳು ಕಲಾ ಆಸ್ವಾದಕರ ಕೇಂದ್ರ ಬಿಂದುವಾಗಿದೆ .