ಕೋಲಾರ : ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ‘ನಿರ್ಲಕ್ಷದಿಂದ’ ಬಾಣಂತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಆರೋಗ್ಯದಲ್ಲಿ ಏರುಪೇರು ಕಂಡರೂ ವೈದ್ಯರು ಸಮಯಕ್ಕೆ ಸರಿಯಾಗಿ ಸ್ಪಂದಿಸದ ಕಾರಣ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಕೋಲಾರ ಎಸ್ ಎನ್ ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಗೆಂದೇ ತಾಯಿ ಮತ್ತು ಮಕ್ಕಳ ಸುಸರ್ಜಿತ ಆಧುನಿಕ ಘಟಕ ಸ್ಥಾಪನೆಯಾಗಿದ್ದರೂ ಸಹ ಬಾಣಂತಿ ಸಾವನ್ನಪಿರುವುದು ದುರದೃಷ್ಟಕರ ಸಂಗತಿ. ಕೋಲಾರ ತಾಲೂಕಿನ ಜಂಗಾಲ ಹಳ್ಳಿಯ ಭವಾನಿ (26) ಎಂಬುವವರು ಸೋಮವಾರ ಬೆಳಿಗ್ಗೆ ಹೆರಿಗೆಗೆ ಎಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ವೇಳೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಮಧ್ಯರಾತ್ರಿ ಬಾಣಂತಿ ಅರೋಗ್ಯದಲ್ಲಿ ಏರುಪೇರಾಗಿ ನೋವು ಎಂದಾಗ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ. ವೈದ್ಯರು ಇಂಜೆಕ್ಷನ್ ನೀಡಿದ ನಂತರ ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಿದ್ದು, ಇಂಜೆಕ್ಷನ್ ನೀಡಿದ ಕೆಲ ಸಮಯದಲ್ಲೇ ಬಾಣಂತಿ ಸಾವನಪ್ಪಿದ್ದಾಳೆ.
ಇದಕ್ಕೆ ಕೋಲಾರ ಜಿಲ್ಲಾ ಆಸ್ಪತ್ರೆ ವೈದ್ಯೆ ಡಾ. ಶಾಂತಾ ಅವರ ನಿರ್ಲಕ್ಷ್ಯ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇದೀಗ ಭವಾನಿ ಸಂಬಂಧಿಕರು ಕೋಲಾರ ಟೌನ್ ಪೊಲೀಸ್ ಠಾಣೆಗೆ ವೈದ್ಯೆ ಡಾ.ಶಾಂತಾ ವಿರುದ್ಧ ದೂರು ದಾಖಲಿಸಿದ್ದಾರೆ.
Can I simply say what a reduction to find somebody who truly is aware of what theyre talking about on the internet. You undoubtedly know tips on how to bring a difficulty to gentle and make it important. More individuals have to learn this and understand this facet of the story. I cant believe youre no more widespread because you undoubtedly have the gift.