ಕೋಲಾರ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಜೆಡಿಎಸ್ ತಯಾರಿ ನಡೆಸುತ್ತಿದೆ. ಈ ನಡುವೆ ಇಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕೋಲಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಹೆಸರು ಸಹ ಕೇಳಿ ಬರ್ತಿದೆ. ಈ ಬಾರಿ ಕೋಲಾರ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಸೀಟ್ ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಬೇಕು. ಸಂಸದ ಮುನಿಸ್ವಾಮಿ ಸಹ ನಿರೀಕ್ಷೆ ಇಟ್ಟಿದ್ದಾರೆ. ಅಂತಿಮವಾಗಿ ಪಟ್ಟಿ ಬರಲಿದೆ. ಮುನಿಸ್ವಾಮಿ ಸಹ ಸಮರ್ಥರಿದ್ದಾರೆ ಎಂದರು.
ರಾಜ್ಯ ಕಾಂಗ್ರೆಸ್ನ ಕೆಟ್ಟ ಸರ್ಕಾರ ತೆಗೀಬೇಕಾಗಿದೆ. ಬಜೆಟ್ನಲ್ಲಿ ಜಾಹೀರಾತು ಕೊಡೋಕೆ 200 ಕೋಟಿ ಅನುದಾನ ಪಡೆಯುತ್ತಾರೆ. ರೈತರು ನಷ್ಟದಲ್ಲಿದ್ದಾರೆ ಪರಿಹಾರ ಕೊಡೋಕೆ ಹಣ ಇಲ್ಲ. ರೈತರಿಗೆ ತಲಾ 2 ಸಾವಿರ ಕೊಡ್ತೀವಿ ಅಂತ 620 ಕೋಟಿ ಮೀಸಲಿಟ್ಟಿದ್ದಾರೆ. ಅದರಲ್ಲಿ 75 ಪರ್ಸೆಂಟ್ ಕೇಂದ್ರದ್ದು, 25 ಪರ್ಸೆಂಟ್ ರಾಜ್ಯದ್ದು. ಜಾಹೀರಾತು ಕೊಡೋಕೆ 200 ಕೋಟಿ ಹಣ ಪಾಸ್ ಮಾಡ್ತಾರೆ. ಜಾಹಿರಾತಿನಲ್ಲಿ ಇರುವ ಕಲರ್ ಫೋಟೋ ನೋಡಿದ್ರೆ ಹೇಸಿಗೆ ಆಗುತ್ತೆ. ಸರ್ಕಾರ ಯಾರಪ್ಪನ ದುಡ್ಡಲ್ಲಿ ಜಾಹೀರಾತು ಕೊಡ್ತಿದ್ದಾರೆ. ರೈತರ ಸಾಲಮನ್ನ ಮಾಡಿದ ಬಳಿಕ ನಾನು ಜಾಹೀರಾತು ಎಲ್ಲೂ ಹಾಕಿಲ್ಲ. ಗೃಹಲಕ್ಷ್ಮಿ ಯೋಜನೆಯಲ್ಲಿ ಬೇಕಾದ್ರೆ ಇನ್ನು 2 ಸಾವಿರ ಹೆಚ್ಚಿಗೆ ಕೊಡಲಿ. ಸರ್ಕಾರ ಗ್ಯಾರಂಟಿ ಬಗ್ಗೆ ಕನವರಿಕೆ ಮಾಡಿ ಖಜಾನೆ ಖಾಲಿ ಮಾಡಿಕೊಳ್ತಿದ್ದಾರೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ರಾಜ್ಯದ ಜನತೆ ಕಾಂಗ್ರೆಸ್ನ ಕೆಟ್ಟ ಸರ್ಕಾರ ತೆಗೆಯಬೇಕಿದೆ. ಜಾಹೀರಾತು ಕೊಡೋಕೆ ಬಜೆಟ್ನಲ್ಲಿ 200 ಕೋಟಿ ಅನುದಾನ ಪಡೆಯುತ್ತಾರೆ. ರೈತರು ನಷ್ಟದಲ್ಲಿದ್ದಾರೆ, ಪರಿಹಾರ ಕೊಡೋಕೆ ಹಣ ಇಲ್ಲ. ಜಾಹೀರಾತು ಕೊಡೋಕೆ 200 ಕೋಟಿ ಹಣ ಪಾಸ್ ಮಾಡ್ತಾರೆ. ಜಾಹೀರಾತಿನಲ್ಲಿ ಇರುವ ಕಲರ್ ಫೋಟೋ ನೋಡಿದ್ರೆ ಹೇಸಿಗೆ ಆಗುತ್ತೆ. ಸರ್ಕಾರ ಯಾರಪ್ಪನ ದುಡ್ಡಲ್ಲಿ ಜಾಹೀರಾತು ಕೊಡ್ತಿದ್ದಾರೆ ಎಂದು ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
https://www.youtube.com/watch?v=ZjV1NiFGpiU