ಕೊಡಗು : ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ರವರು ಇಂದು ಭಾಗಮಂಡಲ ಹಾಗೂ ತಲಕಾವೇರಿಯ ಕಾವೇರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮುಂಬರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಯದುವೀರ್ ಅವರ ಗೆಲುವಿಗಾಗಿ ಇದೇ ಸಂದರ್ಭ ಬಿಜೆಪಿ ಪದಾಧಿಕಾರಿಗಳು ಪ್ರಾರ್ಥನೆ ಸಲ್ಲಿಸದರು. ಮಡಿಕೇರಿ ಯಿಂದ ನೇರವಾಗಿ ಭಾಗಮಂಡಲಕ್ಕೆ ಬೆಳಿಗ್ಗೆ ಆಗಮಿಸಿದ ಯದುವೀರ್ ಬಗಂಡೇಶ್ವರ ಸನ್ನಿಧಿಯಲ್ಲಿ ಸಂಕಲ್ಪದೊಂದಿಗೆ ಪೂಜಿ ಸಲ್ಲಿಸಿದರು ನಂತರ ತಲಕಾವೇರಿಗೆ ತೆರಳಿ ಅಗಸ್ತ್ಯ,ಗಣಪತಿ ಗುಡಿಗಳಲ್ಲೂ ಕೂಡ ಪೂಜಿಸಲ್ಲಿಸಿದರು. ಭಾಗಮಂಡಲ ಹಾಗೂ ತಲಕಾವೇರಿಯ ಪ್ರದೇಶವನ್ನು ವೀಕ್ಷಿಸಿದ ಯದುವೀರ್ ರವರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ ಗೈರು ಹಾಜರಾಗಿದ್ದರು.