Freedom TV

ಮದಗಜಗಳ ಕದನ ಹೇಗಿದೆ ಗೊತ್ತಾ..? ವಿಡಿಯೋ ವೈರಲ್

ಕೇರಳದ ತ್ರಿಶ್ಸೂರ್​​ನಲ್ಲಿರುವ ತಾರಕಲ್ ದೇವಾಲಯದ ಅರಟ್ಟು ಪೂಜಾ ಉತ್ಸವ ವೇಳೆ ಅನಾಹುತ ನಡೆದಿದೆ. ಕಾರ್ಯಕ್ರಮ ಮುಗಿಯುವ ಹೊತ್ತಲ್ಲಿ ಅನೆಯೊಂದು ಸಿಟ್ಟಿಗೆದ್ದು ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದೆ. ಎರಡು ಆನೆಗಳು ಮದವೇರಿದ ರೀತಿಯಲ್ಲಿ ಗುದ್ದಾಡಿಕೊಂಡಿವೆ.

ಎರಡು ಆನೆಗಳ ಕಾದಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಮದವೇರಿದ ಆನೆಗಳ ನಿಯಂತ್ರಣಕ್ಕೆ ಮಾವುತರು ಹರಸಾಹಸ ಮಾಡಿದರೂ ಪ್ರಯೋಜನವಾಗಿಲ್ಲ. ಆನೆಗಳ ರಣಭೀಕರ ಕದನದಿಂದ ಸ್ಥಳದಲ್ಲಿ ಉದ್ಘಿಗ್ನ ಪರಿಸ್ಥಿತಿ ಏರ್ಪಟಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ವೈರಲ್ ಆಗಿದೆ.

Comments (0)

Your email address will not be published. Required fields are marked *

Back to top button