ಕಲಬುರ್ಗಿ: ಬಿಜೆಪಿಯವರಿಗೆ, ಸ್ಥಳೀಯ ಬಿಜೆಪಿ ಮುಖಂಡರಿಗೆ ನಾನು ಅವರ ಮನೆ ದೇವರು. ನನ್ನ ಹೆಸರು ಜಪಿಸಿಲ್ಲ ಅಂದ್ರೆ ಅವರಿಗೆ ಅನ್ನ ಜೀರ್ಣ ಆಗಲ್ಲ ರಾತ್ರಿ ನಿದ್ರೆ ಬರೋದಿಲ್ಲ. ದಿನಕ್ಕೆ ಹತ್ತು ಸರಿ ವಿಪಕ್ಷ ನಾಯಕ ಅಶೋಕ ಸೇರಿ ಸ್ಥಳೀಯ ಉಮೇಶ ಜಾದವ್ ತನಕ ನನ್ನ ಹೆಸರು ಹೇಳಲೇಬೇಕು ಎಂದು ಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದರು.
ಕಲುಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದರು. ವಂದೇ ಭಾರತ ರೈಲು ಡಕೋಟಾ ಎಕ್ಸಪ್ರೆಸ್ ಎಂದು ವ್ಯಂಗ್ಯ ಮಾಡಿದ ಸಚಿವರು,ಕಲಬುರ್ಗಿ ರೈಲ್ವೆ ಡಿವಿಜನ್ ಬಂದಿದ್ರೆ ಈ ಭಾಗದ ಸಾವಿರಾರು ಜನ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತಿತ್ತು ಎಂದರು.
ಅನಂತ್ಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುತ್ತೆವೆ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಅನಂತ್ಕುಮಾರ ಅವರಿಗೆ ತಲೆಕಟ್ಟಿದೆ. ಮಾನಸಿಕ ಸಂತುಲನೇ ಇಲ್ಲ. ಬಿಜೆಪಿಯವರು ಈ ಬಾರಿ ಬಾಯಿ ಬಿಟ್ಟಿದ್ದಾರೆ. ಈ ಹಿಂದೆ ಸಂಸದ ಹೆಗಡೆ ಇದೆ ಹೇಳಿಕೆ ನೀಡಿದಾಗ ಯಾರು ಬಾಯಿ ಬಿಟ್ಟಿರಲಿಲ್ಲ.ಇದಕ್ಕೆ ಉತ್ತರ ನಾನಲ್ಲ ಆರ್ ಅಶೋಕ ಹಾಗೂ ವಿಜಯೇಂದ್ರ ಅವರು ಕೋಡಬೇಕು. ಬಿಜೆಪಿ ಪಕ್ಷದಲ್ಲಿ ಪದೆ ಪದೆ ಸಂವಿಧಾನವನ್ನು ನಿರ್ನಾಮ ಮಾಡ್ತಿವಿ ಅಂತ ಮಾತುಗಳು ಯಾಕೆ ಬರ್ತಾ ಇದೆ . ಎಲೆಕ್ಷನ್ ಕಮಿಷನ್ ನನ್ನು ಕಂಟ್ರೋಲ್ ಗೆ ತೆಗೆದುಕೊಂಡು ಪ್ರಜಾಪ್ರಭುತ್ವವನ್ನು ಮುಗಿಸಲಿಕ್ಕೆ ಬಿಜೆಪಿಯವರು ಹುನ್ನಾರ ನಡೆಸಿದ್ದಾರೆ. ಸಂವಿಧಾನವನ್ನು ಮುಗಿಸಿಬಿಟ್ಟು ಇವರು ಇಡೀ ರಾಷ್ಟ್ರವನ್ನು ಅವರ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಿಕೆ ಪ್ರಯತ್ನ ಮಾಡುತ್ತಿದ್ದಾರೆ. ಸಿಎಎ ಜಾರಗೆ ತಂದಿರೋದು ಎಸ್ ಬಿ ಐ ಅವರು ಇವತ್ತು ಚುನಾವಣಾ ಬಾಂಡ್ಸ್ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಾರೆ.ಸುಪ್ರೀಂ ಕೋರ್ಟ್ ಎಸ್ ಬಿ ಐ ಅವರಿಗೆ ಹಾಕಿದೆ ಈ ಪ್ರಕರಣದ ಗಮನ ಬೇರೆಡೆ ಸೆಳೆಯಲು ಸಿಎಎ ನಾಟಕ ತಂದಿರೋದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿರು.
ಇನ್ನೂ, ಮೈಸೂರು ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕಟ್ ಮಾಡದ್ದಕ್ಕೂ ನನಗೂ ಏನರಿ ಸಂಬಂಧ ಎಂದ ಸಚಿವರು,ದೇಶದ್ರೋಹಿ ಕೆಲಸ ಮಾಡಿದ್ಮೇಲೆ ಟಿಕೆಟ್ ಕೋಡ್ತಾರೆ ಅಂದ್ರೆ ಅವರಿಗೆ ಬಿಟ್ಟಿದ್ದು,ಪಾಸ್ ಅವರು ಕೊಟ್ಟಿದ್ದಾರೆ, ಪಾಸ್ ಯಾಕೆ ಕೊಟ್ಟಿದ್ದಾರೆ ಅಂತ ಕೇಳಿದ್ರೆ ತಾಯಿ ಚಾಮುಂಡೇಶ್ವರಿ ಕೇಳಿ ಅಂತ ಹೇಳಿದ್ರಡ ಇನ್ನೇನ್ ಹೇಳ್ಬೇಕು. ಟಿಕೆಟ್ ಅನ್ನು ತಾಯಿ ಚಾಮುಂಡೇಶ್ವರಿಗೆ ಕೇಳಿ ಅಂತ ಬಿಜೆಪಿಯವರು ಹೇಳಿರುವುದು ಅಷ್ಟೇ. ಬಿಜೆಪಿಯಲ್ಲಿ ಮಿಲಾಪಿ ಕುಸ್ತಿ ನಡೆದಿದೆ ಅಂತ ಹೇಳ್ತಿದ್ದಾರೆ. ಯಾರು ಹೇಳ್ತಿರೋದು ನಾವಲ್ಲ ಅವರು, ಅವರಿಗೆ ಕೇಳಿಬಿಡಿ ಯಾರು ಮಾಡುತ್ತಿದ್ದಾರೆ ಅಂದು ಬಿಟ್ಟು ಇಂತಹ ಪ್ರಗತಿಪರ ಯುವಕನಿಗೆ ಯಾರು ಬಿಜೆಪಿಯಲ್ಲಿ ಅವರ ಹೋರಾಟವನ್ನು ನಿಲ್ಲಿಸಿದ್ದಾರೆ ಅಂತ ಕೇಳಿಬಿಡಿ ಎಂದು ಹೇಳಿದ್ದಾರೆ.