ಮೋದಿ ಕರ್ನಾಟಕಕ್ಕೆ ಬಂದಾಗೆಲ್ಲಾ ಶ್ಯಾಡೋ ಸಿಎಂ ಅಂತಾ ಹೇಳ್ತಾರೆ, ನಮ್ಮಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಅಂತಾ ಸ್ಪಷ್ಟವಾಗಿದೆ. ಮೋದಿ ಗ್ಯಾರಂಟಿ ಕೇವಲ ಟಿವಿಯಲ್ಲಿದೆ ನಮ್ಮ ಗ್ಯಾರೆಂಟಿ ನಿಮ್ಮ ಕೈಯಲ್ಲಿದೆ ಎಂದು ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ರು.
ಮೋದಿ ಸುನಾಮಿ ಅಲೆ ದಕ್ಷಿಣದಲ್ಲಿ ಎಲ್ಲೂ ಇಲ್ಲ. ವಿಜಯೇಂದ್ರ ನಾಯಕತ್ವವನ್ನು ಸ್ವತಃ ಅವರ ಪಕ್ಷದವರೆ ಒಪ್ಪಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಗಿಂತ ಹೆಚ್ಚಿನ ಕುಟುಂಬ ರಾಜಕಾರಣ ಬಿಜೆಪಿಯಲ್ಲಿದೆ. ಬೇಕಾದ್ರೆ ಡಿ ಎನ್ ಎ ಟೆಸ್ಟ್ ಮಾಡಿಸೋಣ ಯಾರ್ಯಾರು ಯಾರ ಕುಟಂಬದವರು ಅಂತಾ ಗೋತ್ತಾಗುತ್ತೆ ವಿತ್ ಡಿ ಎನ್ ಎ ಕಿಟ್ ಇಟ್ಟು ಚರ್ಚೆ ಮಾಡೋಣ ಬನ್ನಿ ಎಂದು ಗುಡುಗಿದ್ರು.
ಬಿಜೆಪಿಯವರು ಒಂದೆ ಕಟುಂಬ ಅಂತಾ ಹೇಳ್ತಿದ್ದಾರೆ. ಅತಿ ಹೆಚ್ಚು ಭ್ರಷ್ಟಾಚಾರ ಆಗಿರೋದು ಬಿಜೆಪಿ ಅವಧಿಯಲ್ಲೆ. ಇನ್ನೂ ಮೋದಿಯವರು ವಾಟ್ಸ್ ಆಪ್ ಯೂನಿವರ್ಸಿಟಿ ಎಂದು ವ್ಯಂಗ್ಯವಾಡಿದ್ರು. ಈಗಾಗಲೇ, ಜನ ಬಿಜೆಪಿಯನ್ನ 40% ಸರ್ಕಾರ ಅಂತಾ ಕಿತ್ತೊಗೆದಿದ್ದಾರೆ. ಮೋದಿಯ ಅಲೆಗೆ ಹೆದರಿ ಯಾವೊಬ್ಬ ಸಚಿವರು ನಿಲ್ತಿಲ್ಲಾ ಅನ್ನೋ ವಿಜಯೇಂದ್ರ ಹೇಳಿಕೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಇವರೆ ಸಾಕಲ್ವಾ ಸಚಿವರು ಯಾಕೆ ನಿಲ್ಲಬೇಕು. ಸಚಿವರೇ ನಿಲ್ಲಬೇಕು ಅಂತಾ ಏನಾದ್ರು ಇದ್ಯಾ ಹೇಳಿ. ವಿಜಯೇಂದ್ರ ನಿಮ್ಮ ನಾಯಕತ್ವದ ಮೇಲೆ ಅಸಮಧಾನ ಇದೆ. ಗೋ ಬ್ಯಾಕ್ ಅಭಿಯಾನ ಶುರುವಾಗಿದೆ ಇನ್ನೊಂದು ಸ್ವಲ್ಪ ದಿನದಲ್ಲಿ ನಿಮ್ಮ ವಿರುದ್ದ ಕುಡ ಶುರುವಾಗುತ್ತೆ. ನಿಮ್ಮ ಸ್ವ ಕ್ಷೇತ್ರದಲ್ಲಿ ಏನಾಗ್ತಿದೆ ಅದನ್ನ ನೋಡಿಕೊಳ್ಳಿ. ನಿಮ್ಮ ಪೂಜ್ಯ ಅಪ್ಪಾಜಿಯವರ ಕ್ಷೇತ್ರದಲ್ಲಿ ಗೋ ಬ್ಯಾಕ್ ಶುರುವಾಗುತ್ತೆ ಎಂದರು. ಕಾಂಗ್ರೆಸ್ ಟಿಕೆಟ್ ಯಾರಿಗೆ ಕೋಡಬೇಕು ಅನ್ನೋದು ಡಿಸೈಡ್ ಮಾಡೋಕೆ ಬಿಜೆಪಿಯವರು ಯಾರು ಎಂದು ವಾಗ್ದಾಳಿ ಮಾಡಿದ್ರು.
ಇವತ್ತು ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಕಲಬುರಗಿಗೆ ಆಗಮಿಸ್ತಿದ್ದಾರೆ. ಕಲಬುರಗಿ ಗ್ರಾಮೀಣ ಬಾರ್ಡರ್ ನಿಂದ ಅವರನ್ನ ಸ್ವಾಗತ ಮಾಡಿಕೊಳ್ಳಲಾಗುತ್ತದೆ. ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ ಮೇರವಣಿಗೆ ಮೂಲಕ ಕರೆತರಲಾಗುತ್ತದೆ. ಬಳಿಕ ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟು ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಾಟ್ಟಾಗಿ ಹೋಗುವದರ ಬಗ್ಗೆ ಸಭೆ ನಡೆಸಲಾಗುತ್ತದೆ. ನಾಳೆಯಿಂದ ಅಧಿಕೃತ ಪ್ರಚಾರ ಶುರುವಾಗುತ್ತದೆ ಎಂದರು.
ಇನ್ನು ಮಲ್ಲಿಕಾರ್ಜುನ್ ಖರ್ಗೆ ಸೋಲಿನ ಭಯದಿಂದ ಚುನಾವಣೆಯಿಂದೆ ಹಿಂದೆ ಸರಿದಿದ್ದಾರೆ ಎಂಬ ಆರ್ ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಪ್ರಿಯಾಂಕ್ ಅಶೋಕ್ ಅವರಿಗೆ ಕಾಮನ್ ಸೆನ್ಸ್ ಇಲ್ಲ. ಮಲ್ಲಿಕಾರ್ಜುನ್ ಖರ್ಗೆ 50 ವರ್ಷ ಎಲೆಕ್ಟೆಡ್ ರಾಜಕೀಯದಲ್ಲಿ ಇದ್ದವರು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ ಅವರ ಮೇಲೆ ದೇಶದ ಬಹಳ ದೊಡ್ಡ ಜವಾಬ್ದಾರಿ ಇದೆ. ಇಂಡಿಯಾ ಮೈತ್ರಿ ಕೂಟದ ಜವಾಬ್ದಾರಿ ಇದೆ. ಕಳೆದ ಬಾರಿ ಕೂಡ ಅವರು ಚುನಾವಣೆ ನಿಲ್ಲಬೇಕು ಅಂತಾ ಇರಲಿಲ್ಲ ಎಂದು
ಹಾಗಾಗಿ ಬಿಜೆಪಿಯವರಿಗೆ ಹೇಳಿ ಕೇಳಿ ನಿಲ್ಲಬೇಕು ಅಂತೆನಿಲ್ಲ. ನಿಮ್ಮ ಪಕ್ಷದಲ್ಲಿ ಏನಾಗ್ತಿದೆ ಅಂತಾ ಮೊದಲು ನೋಡ್ಕೊಳಿ ನಿಮ್ಮ ಅಡ್ವೈಸ್ ಅಲ್ಲಿ ಕೊಡಿ ನಮಗೆ ಅದರ ಅವಶ್ಯಕತೆ ಇಲ್ಲ ಎಂದು ಕಿಡಿಕಾಡಿದ್ರು.
ಈಶ್ವರಪ್ಪ, ಅನಂತಕುಮಾರ್, ಸದಾನಂದ ಗೌಡ ನಿಮ್ಮ ಪಕ್ಷ ಒಂದು ಕುಟುಂಬದ ಹಿಡತದಲ್ಲಿದೆ ಅಂತಾ ಹೇಳ್ತಿದ್ದಾರೆ. ಆದ್ರೆ ಗೋ ಬ್ಯಾಕ್ ಸುಧಾಕರ್, ಗೋ ಬ್ಯಾಕ್ ಶೋಭಕ್ಕ ಅನ್ನೋ ಸದ್ದು ಕೇಳಿ ಬರ್ತಾ ಇದೆ. ಮೊದಲು ನಿಮ್ಮ ಸಂಸಾರದಲ್ಲಿ ಬಿರುಕು ಹುಟ್ಟಿರೋದನ್ನ ಮೊದಲು ಸರಿಪಡಿಸಿಕೊಳ್ಳಿ ಮೊದಲು ನಿಮ್ಮ ಸಂಸಾರ ಕಟ್ಟೋದನ್ನ ಕಲಿಯಿರಿ. ಬೇರೆಯವರ ಸಂಸಾರದಲ್ಲಿ ಹುಳಿ ಹಿಂಡೋದನ್ನ ಬಿಟ್ಟು ಬಿಡಿ ಎಂದರು.
ಚುನಾವಣಾ ಕಾವು ಏರ್ತಿದ್ದ ಹಾಗೆ ಪರ್ಸನಲ್ ಅಟ್ಯಾಕ್ ಶುರುವಾಗುತ್ತೆ. ಹತ್ತು ವರ್ಷ ಆದ್ರು ಬಿಜೆಪಿಯವರು ದೇವರ ಹೆಸರಲ್ಲೆ ಚುನಾವಣೆ ಮಾಡ್ತಾರೆ ಹೊರತು ಅವರ ಸಾಧನೆ ಮೇಲಲ್ಲ. ಎಸ್ ಟಿ ಸೋಮಶೇಖರ್ ಜೊತೆಗೆ ಇನ್ನೂ ಹಲವು ನಾಯಕರು ಬಿಜೆಪಿ ಬಿಟ್ಟು ಬರ್ತಾರೆ. ಕಲಬುರಗಿಯಲ್ಲಿ ಎಲೆಕ್ಷನ್ ಫ್ರೀ ಆಂಡ್ ಫೇರ್ ಆಗಬೇಕು ಅನ್ನೋ ಜಾಧವ್ ಹೇಳಿಕೆಗೆ, ಎಲೆಕ್ಷನ್ ಕಮಿಷನ್ ಯಾರ ಅಂಡರ್ ಇದೆ. ಮೋದಿ ಕಾನ್ಸಟ್ಯೂಷನ್ ಇದೆ ಅಂತಾ ಹೇಳ್ತಾರೆ ಮೋದಿಯವರು ಅಸಂವಿಧಾನಿಕವಾಗಿ ತಂದಿಟ್ಟಿದ್ದಾರೆ. ಮೋದಿ , ಅಮಿತ್ ಷಾ ಅವರು ನಿಮ್ಮನ್ನ ಸೋಲಿಸೋದಕ್ಕೆ ಪ್ಲ್ಯಾನ್ ಮಾಡಿದ್ದಾರ ಎಂದು ಕಿಡಿಕಾಡಿದ್ರು.
ಕಾನೂನು ಸುವ್ಯವಸ್ಥೆ ಯಾಕೆ ಹಾಳಾಗಿದೆ ಗೋತ್ತಾ..ಎಲ್ಲು ಕೆಲಸ ಆಗಿಲ್ಲ ಅದಕ್ಕೆ ಮುತ್ತಿಗೆ ಹಾಕ್ತಿದ್ದಾರೆ. ಚಿತ್ತಾಪುರದಲ್ಲಿ ಬಿಜೆಪಿ ಕಾರ್ಯಕರ್ತರೆ ನಿಮಗೆ ಮುತ್ತಿಗೆ ಹಾಕಿದ್ದಾರೆ, ಆದ್ರೆ, ಕಾನೂನು ಸುವ್ಯವಸ್ಥೆ ಸರಿ ಇಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದ್ರು. ಬೋಗಸ್ ವೋಟಿಂಗ್ ಹೇಗೆ ಮಾಡಿಸೋದು ಅಂತಾ ಬಿಜೆಪಿಯವರಿಗೆ ಚೆನ್ನಾಗಿ ಗೋತ್ತಿದೆ ಎಂದು ಬಿಜೆಪಿ ವಿರುದ್ದ ಕೆಂಡಕಾಡಿದ್ರು.
ಬಿಜೆಪಿಯವರು ಸುಮಲತಾಗೆ ಟಿಕೇಟ್ ಆಸೆ ತೋರಿಸಿ ಮೋಸ ಮಾಡಿದ್ದಾರೆ ಸುಮಲತಾ ಅವರನ್ನ ಬೇಕಾದಾಗ ಬಳಸಿಕೊಂಡಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ , ಮೋದಿ , ಅಮಿತ್ ಷಾ ಯಾರೆ ಬಂದ್ರು ಗೆಲ್ಲೋದಿಲ್ಲ. ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಗೆದ್ದೆ ಗೆಲ್ತಾರೆ ಅನ್ನೋ ಭರವಸೆ ಇದೆ ಎಂದು ಅವರು ಬಿಜೆಪಿ ಜೆ ಡಿ ಎಸ್ ಹೊಂದಾಣಿಕೆಯಲ್ಲಿ ಇಬ್ಬರು ಹರಕೆಯ ಕೂರಿಗಳಾಗ್ತಿದ್ದಾರೆ ಎಂದು ವ್ಯಂಗ್ಯವಾಡಿದರು.