ರಾಜಕೀಯರಾಜ್ಯಸುದ್ದಿ

ಅನಂತ್​ಕುಮಾರ್ ಹೆಗಡೆಯನ್ನ ಯಾಕೆ ಉಚ್ಛಾಟನೆ ಮಾಡಿಲ್ಲ? : ಡಿಕೆಶಿ

ಕಲಬುರಗಿ : ಕಲಬುರಗಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅನಂತ್​​ ಕುಮಾರ್​​ ಸಂವಿಧಾನ ಬದಲಾವಣೆ ಹೇಳಿಕೆ ವಿಚಾರವಾಗಿ ನಾವಾಗಿದ್ದರೆ ಅವರನ್ನ ಪಾರ್ಟಿಯಿಂದಲೇ ಸಸ್ಪೆಂಡ್ ಮಾಡಿರ್ತಿದ್ವಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಂ ಮೋದಿ ಅವರ ಮೌನತೆ, ಬಿಜೆಪಿ ಸಂಸದರ ಮೌನತೆ ಅವರ ಮೌನಂ ಸಮ್ಮತಿ ಇದೆ ಎಂದು ಅರ್ಥ. ಬಿಜೆಪಿಯ ಭಾವನೆಯನ್ನು ಅನಂತ್ ಕುಮಾರ್ ಹೆಗಡೆ ಕೈಯಿಂದ ಮಾತನಾಡಿಸುತ್ತಿದ್ದಾರೆ ಇದು ಖಂಡನೀಯ, ನಾವಾಗಿದ್ದರೆ ಅವರನ್ನ ಪಾರ್ಟಿಯಿಂದ ಸಸ್ಪೆಂಡ್ ಮಾಡಿರ್ತಿದ್ವಿ. ಇಡೀ ರಾಜ್ಯದ ಜನರಿಗೆ ಕಾರ್ಯಕರ್ತರಿಗೆ ಕರೆ ಕೊಡ್ತಾ ಇದ್ದೇವೆ ಇದರ ವಿರುದ್ಧ ತಾವು ಹೋರಾಟ ಮಾಡಬೇಕು ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಂತ ಸಂವಿಧಾನವನ್ನು ನಾವು ರಕ್ಷಣೆ ಮಾಡ್ಕೋಬೇಕು. ಈ ಹಿಂದೆ ಪ್ರೈ ಮಿನಿಸ್ಟರ್ ಅವರು ಏನು ಭಾಷಣ ಮಾಡಿದ್ದಾರೆ ಅದರ ಬಗ್ಗೆ ಕೂಡ ತಾವೆಲ್ಲರೂ ಯೋಚನೆ ಮಾಡಬೇಕು. ಇವರದ್ದು ಹೇಳೋದೊಂದು ಮಾಡೋದೊಂದು ಇದರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಬೇಕು ಎಂದು ಹೇಳಿದರು.

ದೊಡ್ಡ ಆತ್ಮವಿಶ್ವಾಸದಿಂದ ಇಂದು ಕಲಬುರಗಿಯಲ್ಲಿ ಐದು ಗ್ಯಾರಂಟಿಗಳ ಸಂಪೂರ್ಣ ಅನುಷ್ಠಾನ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ, ಯಾವುದೇ ಪಕ್ಷ ಇರಲೀ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಬಜೆಟ್ ನಲ್ಲೂ ಕೂಡ 52 ಸಾವಿರ ಕೋಟಿ ಗ್ಯಾರಂಟಿ ಗಳಿಗಾಗಿ ಮೀಸಲಿಟ್ಟಿದ್ದೇವೆ. ಇಡೀ ದೇಶದ ಜನ ಗ್ಯಾರಂಟಿ ಮೆಚ್ಚಿದ್ದಾರೆ, ಬಿಜೆಪಿ ಕೂಡ ಒಪ್ಪಿ ಮೋದಿ ಗ್ಯಾರಂಟಿ ಮಾಡಿದ್ದಾರೆ ಎಂದು ಹೇಳಿದರು.

ನಮ್ಮ ಪಕ್ಷ ಅಧಿಕಾರಕ್ಕೆ ತಂದಿದ್ದು ರಾಜ್ಯದ ಜನ, ಕಾಂಗ್ರೆಸ್ ಕಾರ್ಯಕರ್ತರು ಗ್ಯಾರಂಟಿ ಅಲ್ಲದೆ 1.26 ಲಕ್ಷ ಸಾವಿರ ಕೋಟಿ ಹಣ ಅಭಿವೃದ್ಧಿಗಾಗಿ ನಾವು ಮೀಸಲಿಟ್ಟಿದ್ದೇವೆ. ಬೇಸಿಗೆಯಲ್ಲಿ 7 ಸಾವಿರ ಬೋರ್ ವೆಲ್ ಗಳು ಬೆಂಗಳೂರು ನಗರದಲ್ಲಿ ಬತ್ತಿ ಹೋಗಿವೆ. ನೀರಿನ ಸಮಸ್ಯೆ ಆಗದಂತೆ ನಾವು ಜಾಗ್ರತೆ ವಹಿಸಿದ್ದೇವೆ ಎಂದರು.

ನಾವು ಚುನಾವಣೆಗೋಸ್ಕರ ಗ್ಯಾರಂಟಿ ಕೊಟ್ಟಿಲ್ಲ. ಜನರ ಬದುಕಿಗಾಗಿ ಗ್ಯಾರಂಟಿ ತಂದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ 20 ಲೋಕಸಭೆ ಸೀಟ್ ಗೆಲ್ಲುತ್ತೆ. 5 ಗ್ಯಾರಂಟಿಗಳ ಸಂಪೂರ್ಣ ಅನುಷ್ಠಾನಕ್ಕೆ ಬಂದಿದ್ದೆವೆ. ನಾವು ನುಡಿದಂತೆ ನಡೆದಿದ್ದೇವೆ ಜನರು ನಮ್ಮ ಗ್ಯಾರಂಟಿಗಳನ್ನು ನಂಬಿದ್ದಾರೆ. ನಾವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button